ಮುಂಬೈ: ಐಪಿಎಲ್ ಕ್ರಿಕೆಟ್ ನಿಂದಾಗಿ ಭಾರತದಲ್ಲೂ ಅಪಾರ ಜನಪ್ರಿಯತೆ ಹೊಂದಿರುವ ವೆಸ್ಟ್ ಇಂಡೀಸ್ ನ ಹೊಡೆಬಡಿಯ ಕ್ರಿಕೆಟಿಗ ಕ್ರಿಸ್ ಗೇಲ್ ಮುಂಬರುವ ವಿಶ್ವಕಪ್ ಬಳಿಕ ಮಹತ್ವದ ನಿರ್ಧಾರವೊಂದನ್ನು ಹೊರಹಾಕಲಿದ್ದಾರೆ.
2019 ರ ವಿಶ್ವಕಪ್ ಬಳಿಕ ಗೇಲ್ ಏಕದಿನ ಕ್ರಿಕೆಟ್ ಗೆ ಗುಡ್ ಬೈ ಹೇಳಲಿದ್ದಾರಂತೆ. ಏಕದಿನ ಕ್ರಿಕೆಟ್ ನಲ್ಲಿ ವಿಂಡೀಸ್ ಪರ ಬ್ರಿಯಾನ್ ಲಾರಾ ಬಳಿಕ 10 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಲು ಗೇಲ್ ಗೆ ಇನ್ನೂ 223 ರನ್ ಗಳ ಅಗತ್ಯವಿದೆ.
ಕಳೆದ ವಿಶ್ವಕಪ್ ಬಳಿಕ ಗೇಲ್ ಆಡಿದ್ದು ಕೇವಲ 15 ಏಕದಿನ ಪಂದ್ಯಗಳನ್ನು ಮಾತ್ರ. ಇದೀಗ ಇಂಗ್ಲೆಂಡ್ ನಲ್ಲಿ ನಡೆಯಲಿರುವ ವಿಶ್ವಕಪ್ ನಲ್ಲಿ ವಿಂಡೀಸ್ ಪರ ಸ್ಥಾನ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿರುವ ಗೇಲ್ ಬಳಿಕ ಏಕದಿನ ಕ್ರಿಕೆಟ್ ಗೆ ನಿವೃತ್ತಿ ಹೇಳುವುದಾಗಿ ನಿರ್ಧಾರ ಘೋಷಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ