ಮುಂಬೈ: ಟೀಂ ಇಂಡಿಯಾ ನಾಯಕರಾಗಿ ಇದೀಗ ರನ್ ಮೆಷಿನ್ ಎನಿಸಿಕೊಂಡು ಜಾಗತಿಕ ಕ್ರಿಕೆಟ್ ನ ಶ್ರೇಷ್ಠ ಕ್ರಿಕೆಟಿಗರಲ್ಲೊಬ್ಬರಾಗಿರುವ ವಿರಾಟ್ ಕೊಹ್ಲಿ ನಂತರ ಆ ಸ್ಥಾನ ತುಂಬುವ ಕ್ರಿಕೆಟಿಗ ಯಾರು?
ಈ ಪ್ರಶ್ನೆಗೆ ಹಲವರು ಹಲವು ಉತ್ತರ ಹೇಳಬಹುದು. ಆದರೆ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುವ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಕೆಎಲ್ ರಾಹುಲ್ ಹೆಸರು ಹೇಳಿದ್ದಾರೆ.
ಪಂಜಾಬ್ ಮತ್ತು ಆರ್ ಸಿಬಿ ಪರ ಒಟ್ಟಿಗೇ ಕ್ರಿಕೆಟ್ ಆಡಿದ್ದ ಕೆಎಲ್ ರಾಹುಲ್ ಮತ್ತು ಗೇಲ್ ನಡುವೆ ಉತ್ತಮ ಸಂಯೋಜನೆಯಿದೆ. ಇದೀಗ ವಿರಾಟ್ ಕೊಹ್ಲಿ ನಂತರ ಭಾರತ ತಂಡದ ಶ್ರೇಷ್ಠ ಕ್ರಿಕೆಟಿಗ ಯಾರಾಗಬಹುದು ಎಂಬ ಪ್ರಶ್ನೆಗೆ ಗೇಲ್, ರಾಹುಲ್ ಹೆಸರು ಹೇಳಿದ್ದಾರೆ. ಹಾಗಂತ ಅವರು ಒತ್ತಡ ತಮ್ಮ ಮೇಲೆ ಹೇರಿಕೊಳ್ಳಬೇಕಿಲ್ಲ. ಆದರೆ ರಾಹುಲ್ ಗೆ ಆ ಸಾಮರ್ಥ್ಯವಿದೆ ಎಂದು ಗೇಲ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ