Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮತ್ತೆ ವೀರೇಂದ್ರ ಸೆಹ್ವಾಗ್ ಕೆಣಕಿದ ಬ್ರಿಟಿಷ್ ಪತ್ರಕರ್ತ!

ಮತ್ತೆ ವೀರೇಂದ್ರ ಸೆಹ್ವಾಗ್ ಕೆಣಕಿದ ಬ್ರಿಟಿಷ್ ಪತ್ರಕರ್ತ!
NewDelhi , ಗುರುವಾರ, 20 ಅಕ್ಟೋಬರ್ 2016 (14:14 IST)
ನವದೆಹಲಿ: ಮತ್ತೊಮ್ಮೆ ವೀರೇಂದ್ರ ಸೆಹ್ವಾಗ್ ಮೇಲೆ ಬ್ರಿಟಿಷ್ ಪತ್ರಕರ್ತ ಪೀರ್ಸ್ ಮಾರ್ಗನ್ ಗೂಗ್ಲಿ ಎಸೆದಿದ್ದಾರೆ.

ಒಲಿಂಪಿಕ್ಸ್ ನಲ್ಲಿ ಭಾರತ ಪದಕ ಕೇವಲ ಮೂರು ಪದಕ ಗೆದ್ದು ಇಷ್ಟೊಂದು ಬೀಗುತ್ತಿದೆ ಎಂದು ಇದೇ ಮಾರ್ಗನ್ ಹಿಂದೊಮ್ಮೆ ಟೀಕಿಸಿದ್ದರು. ಆಗ ಅದಕ್ಕೆ ಪ್ರತಿಕ್ರಿಯಿಸಿದ್ದ ಸೆಹ್ವಾಗ್ ಇಂಗ್ಲೆಂಡ್ ಇನ್ನೊಮ್ಮೆ ವಿಶ್ವಕಪ್ ಕ್ರಿಕೆಟ್ ಗೆಲ್ಲುವ ಮೊದಲು ಭಾರತ ಚಿನ್ನದ ಪದಕ ಗೆಲ್ಲುತ್ತದೆ ಎಂದು ಪ್ರತಿಕ್ರಿಯಿಸಿದ್ದರು.

ಇದು ಇವರಿಬ್ಬರ ನಡುವಿನ ಟ್ವಿಟರ್ ಸಮರಕ್ಕೆ ನಾಂದಿ ಹಾಡಿತ್ತು. ಇದೀಗ ಮತ್ತೆ ಕಬಡ್ಡಿ ವಿಶ್ವಕಪ್ ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಗೆದ್ದಿದ್ದಕ್ಕೆ ಸೆಹ್ವಾಗ್ “ಕ್ರೀಡೆ ಮಾತ್ರ ಬದಲಾಗಿದೆ. ಫಲಿತಾಂಶ ಅದುವೇ. ಇಂಗ್ಲೆಂಡ್ ಸೋತಿದೆ ಎನ್ನುವಾಗ ಲಾಸ್ ಬದಲು ಲೂಸ್ ಎಂದು ಎರಡು ಬಾರಿ ಒ ಅಕ್ಷರ ಬರೆದುಕೊಂಡಿದ್ದರು. ಆದರೆ ಲೂಸ್ ಸ್ಪೆಲ್ಲಿಂಗ್ ತಪ್ಪಾಗಿ ಬರೆದಿದ್ದರು.

ಇದಕ್ಕೆ ಸೆಹ್ವಾಗ್ ಅವರನ್ನು ಕೆಣಕಿರುವ ಮಾರ್ಗನ್ ಸ್ಪೆಲ್ಲಿಂಗ್ ತಪ್ಪು ಸರಿ ಮಾಡಿದ್ದರು. ಕುತೂಹಲಕಾರಿ ಸಂಗತಿ ಎಂದರೆ ಇದಕ್ಕೆ ಹಲವು ಜನ ಪ್ರತಿಕ್ರಿಯಿಸಿದ್ದಾರೆ. ಕೆಲವರು ಸ್ಪೆಲ್ಲಿಂಗ್ ಮಿಸ್ಟೇಕ್ ಸರಿ ಮಾಡಲು ವೀರೂ ಒಬ್ಬ ಆಂಗ್ಲ ವ್ಯಕ್ತಿಯನ್ನು ಇಟ್ಟುಕೊಂಡಿದ್ದಾರೆ ಎಂದರೆ ಇನ್ನು ಕೆಲವರು ಇನ್ನೊಂದು ಒ ಅಕ್ಷರ ಆಂಗ್ಲರ ಸೋಲಿನ ಪ್ರತೀಕ ಎಂದು ಜರೆದಿದ್ದಾರೆ.

ಅದೂ ಸಾಲದೆಂಬಂತೆ ಇನ್ನೊಬ್ಬ ವ್ಯಕ್ತಿ ಸುಟ್ಟ ಭಾಗಕ್ಕೆ ತಣ್ಣೀರು ಹಾಕುವ ಚಿತ್ರ ಪ್ರಕಟಿಸಿ, ಗಾಯ ಉರಿಯುತ್ತಿದ್ದರೆ ತಣ್ಣೀರು ಹಾಕಿಕೊಳ್ಳಿ ಎಂದು ಮಾರ್ಗನ್ ಗೆ ಟಾಂಗ್ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ವಿರುದ್ಧ ಜೇಮ್ಸ್ ಆಂಡರ್ಸನ್ ಆಡಲ್ಲ