ಬೆಂಗಳೂರು: ಟೀಂ ಇಂಡಿಯಾ ಕೋಚ್ ಆಗಿ ವಿವಾದಾತ್ಮಕವಾಗಿ ರಾಜೀನಾಮೆ ನೀಡಿದ ಅನಿಲ್ ಕುಂಬ್ಳೆ ಬಗ್ಗೆ ಮಾಜಿ ಸ್ಪಿನ್ ದಿಗ್ಗಜ ಬಿಶನ್ ಸಿಂಗ್ ಬೇಡಿ ಬೇಸರ ವ್ಯಕ್ತಪಡಿಸಿದ್ದಾರೆ.
‘ಭಿನ್ನಾಭಿಪ್ರಾಯಗಳಿರುವುದು ಸಹಜ. ಆದರೆ ಭಿನ್ನ ದಾರಿಗಳಿರಬಾರದು. ಈ ಭಿನ್ನಾಭಿಪ್ರಾಯಗಳನ್ನು ಬೆಳೆಯಲು ಬಿಟ್ಟಿದ್ದು ಬಿಸಿಸಿಐ. ಅಲ್ಲಿರುವ ಜನರು ಅನರ್ಹ ವ್ಯಕ್ತಿಗಳು’ ಎಂದು ಬೇಡಿ ಟೀಕಾ ಪ್ರಹಾರ ನಡೆಸಿದ್ದಾರೆ.
ಕುಂಬ್ಳೆಯಂತಹ ಕ್ರಿಕೆಟ್ ದಿಗ್ಗಜನಿಗೇ ಹೀಗಾದರೆ, ಅವರ ಸ್ಥಾನ ತುಂಬಲು ಬರುವ ಇತರರ ಪರಿಸ್ಥಿತಿ ಹೇಗಿರಬೇಡ? ಎಂದು ಬೇಸರ ವ್ಯಕ್ತಪಡಿಸಿರುವ ಬೇಡಿ, ಈ ವಿಚಾರವನ್ನು ಸರಿಯಾಗಿ ನಿಭಾಯಿಸಲಿಲ್ಲ ಎಂದ ಗಂಗೂಲಿಯನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಹಾಗೆ ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಲ್ಲ. ಸರಿಯಾಗಿ ನಿಭಾಯಿಸಲಿಲ್ಲ ಎಂದು ಹೇಳುವುದಾದರೆ, ಯಾರು ನಿಭಾಯಿಸಬೇಕಿತ್ತು? ಇದರಿಂದ ನೀವು ಏನು ಸಂದೇಶ ನೀಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ