ಸಿಡ್ನಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ವರ್ತಿಸುವ ರೀತಿ ಸರಿಯಿಲ್ಲ. ಒಬ್ಬ ನಾಯಕನಾಗಿ ಅವರು ಇನ್ನಷ್ಟು ಜವಾಬ್ದಾರಿಯುತವಾಗಿ ನಡೆದುಕೊಳ್ಳಲು ಕಲಿಯಬೇಕು ಎಂದು ಆಸ್ಟ್ರೇಲಿಯಾ ಮಾಜಿ ವೇಗಿ ಜೆಫ್ ಲಾಸನ್ ಅಭಿಪ್ರಾಯಪಟ್ಟಿದ್ದಾರೆ.
ಎದುರಾಳಿ ಆಟಗಾರರಿಗೆ ಸೆಂಡ್ ಆಫ್ ಕೊಡಲು ಯಾರಿಗೂ ಹಕ್ಕಿಲ್ಲ. ಆ ರೀತಿ ಮಾಡುವುದು ತಪ್ಪು. ಎದುರಾಳಿಯೊಂದಿಗೆ ಅವರು ಬಳಸುವ ಭಾಷೆ ಸರಿಯಾಗಿಲ್ಲ. ನಂತರ ಬಂದು ಪತ್ರಿಕಾಗೋಷ್ಟಿಯಲ್ಲಿ ಸಮಜಾಯಿಷಿ ನೀಡುವುದೆಲ್ಲಾ ಯಾಕೋ ಸರಿ ಕಾಣುತ್ತಿಲ್ಲ ಎಂದು ಲಾಸನ್ ಹೇಳಿಕೊಂಡಿದ್ದಾರೆ.
ಆದರೆ ಒಬ್ಬ ಆಟಗಾರನಾಗಿ ಕೊಹ್ಲಿ ಒಬ್ಬ ಉತ್ತಮ ಆಟಗಾರ. ಆದರೆ ನಾಯಕನಾಗಿ ಅವರ ವರ್ತನೆ ಹೀಗಿರಬಾರದು. ಅವರ ವರ್ತನೆ ಬಗ್ಗೆ ಅಧಿಕಾರಿಗಳು ಯಾಕೆ ವರದಿ ನೀಡಿಲ್ಲ ಎನ್ನುವುದೇ ಅಚ್ಚರಿ ತರಿಸುತ್ತದೆ ಎಂದು ಲಾಸನ್ ಹೇಳಿಕೊಂಡಿದ್ದಾರೆ.
ಆದರೆ ಆಸೀಸ್ ನ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಮಾತ್ರ ತಮ್ಮದೇ ದೇಶದ ಕೆಲವು ಮಾಧ್ಯಮಗಳ ಮೇಲೆ ಕಿಡಿ ಕಾರಿದ್ದಾರೆ. ಕೆಲವು ಪತ್ರಕರ್ತರು ಬೇಕೆಂದೇ ಕೊಹ್ಲಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಅವರನ್ನು ಖಳನಾಯಕನಾಗಿ ಮಾಡಲು ತಂತ್ರ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ