ಹೈದರಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದಿನಿಂದ ಟಿ20 ಸರಣಿ ಆರಂಭವಾಗಲಿದ್ದು, ಟೀಂ ಇಂಡಿಯಾ ಕ್ರಿಕೆಟಿಗರು ದಾಖಲೆ ಮಾಡಲು ಸಾಲುಗಟ್ಟಿ ನಿಂತಿದ್ದಾರೆ.
ಆರಂಭಿಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 400 ಸಿಕ್ಸರ್ ಬಾರಿಸಿ ಶಾಹಿದ್ ಅಫ್ರಿದಿ ದಾಖಲೆಯನ್ನು ಹಿಂದಿಕ್ಕಲು ಹೊರಟಿದ್ದಾರೆ. ಇದಕ್ಕೆ ಅವರಿಗೆ ಬೇಕಾಗಿರುವುದು ಒಂದೇ ಒಂದು ಸಿಕ್ಸರ್.
ಇನ್ನೊಂದೆಡೆ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗೆ ಈ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕರೆ 26 ರನ್ ಗಳಿಸಿದರೂ ಸಾಕು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ 1000 ರನ್ ಗಳಿಸಿದ ದಾಖಲೆಗೆ ಪಾತ್ರರಾಗಲಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸಿರುವ ರೋಹಿತ್ ಶರ್ಮಾರನ್ನು ಹಿಂದಿಕ್ಕಲು 89 ರನ್ ಬೇಕಾಗಿದೆ. ಆದರೆ ರೋಹಿತ್ ಆರಂಭಿಕರಾಗಿರುವುದರಿಂದ ಕೊಹ್ಲಿಗೆ ಈ ದಾಖಲೆ ಹಿಂದಿಕ್ಕಲು ಅಷ್ಟು ಸುಲಭವಲ್ಲ. ಆದರೆ ಯಾವೆಲ್ಲಾ ದಾಖಲೆಗಳು ಮುರಿಯಲಿವೆ ಎಂದು ಕಾದು ನೋಡಬೇಕಿದೆ.