ಮುಂಬೈ: ಟೀಂ ಇಂಡಿಯಾದ ಯುವ ಆಟಗಾರರ ಪಾಲಿಗೆ ತಂಡದೊಳಗೆ ಮೂವರು ಆಟಗಾರರು ಅಣ್ಣಂದಿರಿದ್ದಂತೆ ಅಂತೆ. ಆ ಅಣ್ಣಂದಿರು ಯಾರು ಎಂದು ಯುವ ಸ್ಪಿನ್ನರ್ ಯಜುವೇಂದ್ರ ಚಾಹಲ್ ವಿವರಿಸಿದ್ದಾರೆ.
‘ಟೀಂ ಇಂಡಿಯಾ ಎಂದರೆ ಒಂದು ಕುಟುಂಬವಿದ್ದಂತೆ. ಇಲ್ಲಿ ಹಿರಿಯರು ಯಾವುದೇ ಯುವ ಆಟಗಾರ ತಂಡಕ್ಕೆ ಬಂದರೂ ಅವರು ಅನುಕೂಲವಾಗಿರುವಂತೆ ನೋಡಿಕೊಳ್ಳುತ್ತಾರೆ. ಅವರೆಂದರೆ ವಿರಾಟ್ ಕೊಹ್ಲಿ, ಧೋನಿ ಮತ್ತು ರೋಹಿತ್ ಶರ್ಮಾ’ ಎಂದು ಚಾಹಲ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
‘ಯಾವುದೇ ಸಂದರ್ಭದಲ್ಲಿ ನಿಮಗೆ ಏನೇ ಸಂಶಯಗಳಿದ್ದರೂ ಇವರ ಬಳಿ ಹೋಗಿ ಹೇಳಿಕೊಳ್ಳಲು ಅವಕಾಶವಿದೆ. ಶಿಖರ್ ಧವನ್ ಕೂಡಾ ಹಾಗೆಯೇ. ಯಾರೇ ತಂಡಕ್ಕೆ ಹೊಸದಾಗಿ ಬಂದರೂ ನಮ್ಮ ಜತೆ ಹೊಂದಿಕೊಳ್ಳಲು ವಾತಾವರಣ ಸೃಷ್ಟಿಸುತ್ತಾರೆ. ನಾವು ನಮ್ಮೊಳಗೇ ಸಹಜವಾಗಿದ್ದಷ್ಟು ನಮ್ಮಲ್ಲಿ ಮೈದಾನದಲ್ಲಿ ಆಡಲು ಆತ್ಮವಿಶ್ವಾಸ ಹೆಚ್ಚುತ್ತದೆ ಎನ್ನುವುದು ಈ ಹಿರಿಯರ ಅಭಿಮತ’ ಎಂದು ಚಾಹಲ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.