Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತ-ಆಸ್ಟ್ರೇಲಿಯಾ ಏಕದಿನ: ಆಸೀಸ್ ಮೇಲೆ ಚಾಹಲ್ ಕಮಾಲ್

ಭಾರತ-ಆಸ್ಟ್ರೇಲಿಯಾ ಏಕದಿನ: ಆಸೀಸ್ ಮೇಲೆ ಚಾಹಲ್ ಕಮಾಲ್
ಮೆಲ್ಬೋರ್ನ್ , ಶುಕ್ರವಾರ, 18 ಜನವರಿ 2019 (11:54 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ತೃತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಗೆಲ್ಲಲು 231 ರನ್ ಗಳ ಸುಲಭ ಗುರಿ ಸಿಕ್ಕಿದೆ.


ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಮಧ್ಯಮ ಕ್ರಮಾಂಕದಲ್ಲಿ ಆಸೀಸ್ ಗೆ ಕೊಟ್ಟ ಏಟಿಗೆ ನಿಧಾನಗತಿಯ ಬ್ಯಾಟಿಂಗ್ ಮಾಡಿದ ಅತಿಥೇಯ ಬ್ಯಾಟ್ಸ್ ಮನ್ ಗಳು ನಿಯಮಿತವಾಗಿ ವಿಕೆಟ್ ಕೂಡಾ ಕಳೆದುಕೊಳ್ಳುತ್ತಾ ಸಾಗಿದರು. ಹೀಗಾಗಿ 48.4 ಓವರ್ ಗಳಲ್ಲಿ 230 ಕ್ಕೆ ಆಲೌಟ್ ಆದರು.

ಭಾರತದ ಪರ ಯಜುವೇಂದ್ರ ಚಾಹಲ್ 6 ವಿಕೆಟ್ ಕಿತ್ತರೆ, ಭುವನೇಶ್ವರ್ ಕುಮಾರ್ 2 ಮತ್ತು ಮೊಹಮ್ಮದ್ ಶಮಿಗೆ 2 ವಿಕೆಟ್ ಸಿಕ್ಕಿತು. ಇದರೊಂದಿಗೆ ಚಾಹಲ್ ಆಸ್ಟ್ರೇಲಿಯಾ ನೆಲದಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿ ಏಕದಿನ ಪಂದ್ಯವೊಂದರಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಮಾಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಟ್ರೋಫಿ ಕ್ರಿಕೆಟ್: ಕರಣ್ ನಾಯರ್-ಮನೀಶ್ ಪಾಂಡೆ ಸಾಹಸಕ್ಕೆ ಸೆಮಿಫೈನಲ್ ಗೇರಿದ ಕರ್ನಾಟಕ