ಲಂಡನ್: ಶ್ರೀಲಂಕಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಕೆಲವು ಕಿಡಿಗೇಡಿಗಳು ಕಾಶ್ಮೀರಕ್ಕೆ ನ್ಯಾಯ ಒದಗಿಸಿ ಎಂದು ಭಾರತ ವಿರೋಧಿ ಭಿತ್ತಿಪತ್ರವನ್ನು ಹೆಲಿಕಾಪ್ಟರ್ ಮೂಲಕ ಹರಿಯಬಿಟ್ಟ ಘಟನೆ ನಡೆದಿತ್ತು.
ಈ ಘಟನೆ ಬಗ್ಗೆ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ ಬಿಸಿಸಿಐ ಆಕ್ಷೇಪ ಸಲ್ಲಿಸಿದೆ. ಭಾರತ ವಿರೋಧಿ ಘೋಷಣೆ ಅಕ್ಷಮ್ಯ ಎಂದು ದೂರಿದೆ. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂದೂ ಎಚ್ಚರಿಕೆ ನೀಡಿದೆ.
ಅಲ್ಲದೆ, ಪಂದ್ಯ ನಡೆಯುವಾಗ ಇಂತಹ ಕಿಡಿಗೇಡಿಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದೆ. ಐಸಿಸಿ ಕೂಡಾ ಈ ಹಿಂದೆ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವುದಾಗಿ ಹೇಳಿತ್ತು.