Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿಶ್ವಕಪ್ 2019: ದೊಡ್ಡ ಮೊತ್ತವನ್ನೂ ಯಶಸ್ವಿಯಾಗಿ ಬೆನ್ನಟ್ಟಿದ ‘ದುರ್ಬಲ’ ಬಾಂಗ್ಲಾದೇಶ

ವಿಶ್ವಕಪ್ 2019: ದೊಡ್ಡ ಮೊತ್ತವನ್ನೂ ಯಶಸ್ವಿಯಾಗಿ ಬೆನ್ನಟ್ಟಿದ ‘ದುರ್ಬಲ’ ಬಾಂಗ್ಲಾದೇಶ
ಲಂಡನ್ , ಮಂಗಳವಾರ, 18 ಜೂನ್ 2019 (09:08 IST)
ಲಂಡನ್: ಈ ಬಾರಿ ವಿಶ್ವಕಪ್ ಕೂಟದಲ್ಲಿ ಅಚ್ಚರಿಯ ಫಲಿತಾಂಶ ನೀಡುವ ತಂಡಗಳಲ್ಲಿ ತಾನು ಒಂದು ಎಂಬುದನ್ನು ಬಾಂಗ್ಲಾದೇಶ ಮತ್ತೊಮ್ಮೆ ಸಾಬೀತುಪಡಿಸಿದೆ.


ನಿನ್ನೆ ವೆಸ್ಟ್ ಇಂಡೀಸ್‍ ವಿರುದ್ಧ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ 322 ರನ್ ಗಳ ಬೃಹತ್ ಮೊತ್ತವನ್ನೇ ಕೇವಲ 3 ವಿಕೆಟ್ ನಷ್ಟಕ್ಕೆ ಯಶಸ್ವಿಯಾಗಿ ಬೆನ್ನಟ್ಟಿ ಗೆದ್ದು ಬೀಗಿದೆ. ಆ ಮೂಲಕ ಕೂಟದ ದೈತ್ಯ ತಂಡಗಳಿಗೆ ಎಚ್ಚರಿಕೆಯ ಸಂದೇಶ ನೀಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್‍ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿತ್ತು. ಶೈ ಹೊಪ್ 96 ರನ್ ಗಳಿಸಿದರೆ ಹೆಟ್ ಮೈರ್ 50 ರನ್ ಗಳಿಸಿದರು.  ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಆರಂಭದಿಂದಲೂ ವಿಕೆಟ್ ಜತೆಗೆ ರನ್ ಗತಿಯನ್ನೂ ಕಾಯ್ದುಕೊಂಡಿತು. ಅಂತಿಮವಾಗಿ ಕೇವಲ 41.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 322 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ಬಾಂಗ್ಲಾ ಪರ ಶಕೀಬ್ ಅಲ್ ಹಸನ್ 99 ಎಸೆತಗಳಲ್ಲಿ 124 ರನ್ ಮತ್ತು ಲಿಟನ್ ದಾಸ್ ಅಜೇಯ 94 ರನ್ ಬಾರಿಸಿ ಗೆಲುವಿನ ರೂವಾರಿಯಾದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ 2019: ಭಾರತದ ಮುಂದಿನ ಭೇಟೆ ಯಾರು ಗೊತ್ತಾ?