Select Your Language

Notifications

webdunia
webdunia
webdunia
webdunia

ಸೂಪರ್ ಫೋರ್ ಹಂತದ ಉಳಿದ ಪಂದ್ಯಗಳು ಮಳೆಗೆ ವಾಶ್ ಔಟ್ ಆದರೆ ಫೈನಲಿಸ್ಟ್ ಯಾರು?

ಸೂಪರ್ ಫೋರ್ ಹಂತದ ಉಳಿದ ಪಂದ್ಯಗಳು ಮಳೆಗೆ ವಾಶ್ ಔಟ್ ಆದರೆ ಫೈನಲಿಸ್ಟ್ ಯಾರು?
ಕೊಲೊಂಬೋ , ಶನಿವಾರ, 9 ಸೆಪ್ಟಂಬರ್ 2023 (08:20 IST)
ಕೊಲೊಂಬೋ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಪಾಕಿಸ್ತಾನದ ಲಾಹೋರ್ ನಲ್ಲಿ ನಡೆದ ಮೊದಲ ಸೂಪರ್ ಫೋರ್ ಪಂದ್ಯವನ್ನು ಪಾಕ್ ತಂಡ ಭರ್ಜರಿಯಾಗಿ ಗೆದ್ದುಕೊಂಡಿದೆ.

ಉಳಿದ ಎಲ್ಲಾ ಸೂಪರ್ ಫೋರ್ ಹಂತದ ಪಂದ್ಯಗಳು ಶ್ರೀಲಂಕಾದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ ಈ ಪಂದ್ಯಗಳಿಗೆ ಶೇ.80 ರಷ್ಟು ಮಳೆಯಾಗುವ ಸಾಧ‍್ಯತೆಯಿದೆ ಎನ್ನುವ ವರದಿಗಳು ಆತಂಕ ತಂದಿದೆ. ಭಾರತ-ಪಾಕ್ ಪಂದ್ಯಕ್ಕೆ ಮಾತ್ರ ಮೀಸಲು ದಿನವೂ ನಿಗದಿಯಾಗಿದೆ. ಉಳಿದ ಪಂದ್ಯಗಳು ನಡೆಯದೇ ಇದ್ದರೆ ಆಗ ಅಂಕಗಳು ಪ್ರಮುಖವಾಗಲಿದೆ.

ಅಂಕಗಳ ಆಧಾರದಲ್ಲಿ ಪಾಕಿಸ್ತಾನ ನೇರವಾಗಿ ಫೈನಲ್ ತಲುಪಲಿದೆ. ಆದರೆ ಉಳಿದಂತೆ ಶ್ರೀಲಂಕಾ, ಭಾರತ, ಬಾಂಗ್ಲಾ ತಂಡಗಳು ತಲಾ 3 ಅಂಕ ಗಳಿಸಲಿವೆ. ಬಾಂಗ್ಲಾ ಈಗಾಗಲೇ ಮೊದಲ ಸೂಪರ್ ಫೋರ್ ಪಂದ್ಯ ಸೋತಿರುವುದರಿಂದ ಫೈನಲ್ ರೇಸ್ ನಿಂದ ಹೊರಬೀಳಲಿದೆ. ಉಳಿದಂತೆ ಲಂಕಾ-ಭಾರತ ನಡುವೆ ಟಾಸ್ ನಡೆಯಲಿದೆ. ಟಾಸ್ ಗೆದ್ದ ತಂಡ ಫೈನಲ್ ತಲುಪಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ಗಾಗಿ ಸ್ಥಾನ ತ್ಯಾಗ ಮಾಡುವವರು ಯಾರು?