Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ವರ್ಷ ಭಾರತದ ಪರ ಅತೀ ಹೆಚ್ಚು ಪಂದ್ಯವಾಡಿರುವ ಆಟಗಾರ ಯಾರು?

ಈ ವರ್ಷ ಭಾರತದ ಪರ ಅತೀ ಹೆಚ್ಚು ಪಂದ್ಯವಾಡಿರುವ ಆಟಗಾರ ಯಾರು?
ಮುಂಬೈ , ಸೋಮವಾರ, 25 ಡಿಸೆಂಬರ್ 2023 (09:55 IST)
Photo Courtesy: Twitter
ಮುಂಬೈ: 2023 ಮುಗಿಯುತ್ತಾ ಬಂದಿದ್ದು, ಈ ವರ್ಷ ಟೀಂ ಇಂಡಿಯಾ ಪರ ಅತೀ ಹೆಚ್ಚು ಪಂದ್ಯವಾಡಿದ ಆಟಗಾರ ಮತ್ತು ಅವರು ತೆಗೆದುಕೊಂಡ ಸಂಭಾವನೆ ಎಷ್ಟು ಎಂದು ನೋಡೋಣ.

ಈ ವರ್ಷ ಅತೀ ಹೆಚ್ಚು ಪಂದ್ಯವಾಡಿದ ದಾಖಲೆ ಇರುವುದು ಕುಲದೀಪ್ ಯಾದವ್ ಹೆಸರಲ್ಲಿ. ಸ್ಪಿನ್ನರ್ ಕುಲದೀಪ್ ಈ ವರ್ಷ ಒಟ್ಟು 30 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ಪಂದ್ಯಗಳಿಂದ 49 ವಿಕೆಟ್ ಕಬಳಿಸಿದ್ದಾರೆ.

ಹೀಗಾಗಿ ಈ ವರ್ಷ ಅತೀ ಹೆಚ್ಚು ಪಂದ್ಯವಾಡಿ ಹೆಚ್ಚು ಸಂಭಾವನೆ ಪಡೆದ ದಾಖಲೆಯೂ ಕುಲದೀಪ್ ಅವರದ್ದು. ವಿಶೇಷವೆಂದರೆ ವೇತನ ವಿಚಾರದಲ್ಲಿ ಕೊಹ್ಲಿ, ರೋಹಿತ್ ಶರ್ಮಾಗಿಂತಲೂ ಕುಲದೀಪ್ ಮುಂದಿದ್ದಾರೆ.

ಏಕದಿನ ಪಂದ್ಯಗಳಲ್ಲಿ ಆಡಿದರೆ ಪ್ರತೀ ಪಂದ್ಯಕ್ಕೆ ಬಿಸಿಸಿಐ 6 ಲಕ್ಷ ರೂ. ನೀಡುತ್ತದೆ. ಅದರಂತೆ ಕುಲದೀಪ್ 30 ಪಂದ್ಯಗಳಿಂದ 1.80 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿರುವುದು ಶುಬ್ಮನ್ ಗಿಲ್. ಅವರು 29 ಪಂದ್ಯಗಳನ್ನಾಡಿದ್ದು 1.74 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೆಸ್ಟ್ ಸರಣಿಗೆ ಮುನ್ನ ತಂಡಕ್ಕೆ ಸೇರ್ಪಡೆಯಾದ ವಿರಾಟ್ ಕೊಹ್ಲಿ: ಫ್ಯಾನ್ಸ್ ನಿಟ್ಟುಸಿರು