Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮುಂದಿನ ಏಕದಿನ ವಿಶ್ವಕಪ್ ನಡೆಯುವ ಸ್ಥಳ ಯಾವುದು? ಯಾವಾಗ?

ಮುಂದಿನ ಏಕದಿನ ವಿಶ್ವಕಪ್ ನಡೆಯುವ ಸ್ಥಳ ಯಾವುದು? ಯಾವಾಗ?
ಮುಂಬೈ , ಬುಧವಾರ, 22 ನವೆಂಬರ್ 2023 (09:20 IST)
Photo Courtesy: Twitter
ಮುಂಬೈ: ಏಕದಿನ ವಿಶ್ವಕಪ್ 2023 ರನ್ನು ಭಾರತ ಏಕಾಂಗಿಯಾಗಿ ಆತಿಥ್ಯ ವಹಿಸಿ ಮುಗಿಸಿದೆ. ಈ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಇದೀಗ ಮುಂದಿನ ಏಕದಿನ ವಿಶ್ವಕಪ್ ಯಾವಾಗ ಎಂಬ ಕುತೂಹಲ ನಿಮಗಿರಬಹುದು. ಏಕದಿನ ವಿಶ್ವಕಪ್ ‍ಪ್ರತೀ ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತಿದೆ. ಮುಂದಿನ ವಿಶ್ವಕಪ್ ನಡೆಯುವುದು 2027 ರಲ್ಲಿ.

ಈ ವಿಶ್ವಕಪ್ ಗೆ ದ.ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ದೇಶಗಳು ಆತಿಥ್ಯ ವಹಿಸುತ್ತಿವೆ. 2003 ರಲ್ಲಿ ದ.ಆಫ್ರಿಕಾ ಕೊನೆಯ ಬಾರಿಗೆ ಏಕದಿನ ವಿಶ್ವಕಪ್ ಗೆ ಆತಿಥ್ಯ ವಹಿಸಿತ್ತು. ಈ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿನ್ನರ್ ಆಗಿದ್ದರೆ ಭಾರತ ರನ್ನರ್ ಅಪ್ ಆಗಿತ್ತು.

ಇದೀಗ ಮುಂದಿನ ಏಕದಿನ ವಿಶ್ವಕಪ್ ವೇಳೆಗೆ ಟೀಂ ಇಂಡಿಯಾದಲ್ಲಿ ಈಗಿರುವ ಬಹುತೇಕ ಆಟಗಾರರು ನಿವೃತ್ತಿಯಾಗುವ ಸಾಧ‍್ಯತೆಯಿದೆ. ಈ ಏಕದಿನ ವಿಶ್ವಕಪ್ ಗೆ ಮೊದಲು ಐಸಿಸಿ ಚಾಂಪಿಯನ್ಸ್ ಟ್ರೋಫಿ, ಟಿ20 ವಿಶ್ವಕಪ್ ಪಂದ್ಯಾವಳಿ, ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಡೆಯಲಿವೆ. 2024 ರ ಟಿ20 ವಿಶ್ವಕಪ್ ನಡೆಯುವುದು ಅಮೆರಿಕಾದಲ್ಲಿ. ಅದರ ನಂತರದ ಟಿ20 ವಿಶ್ವಕಪ್ ಭಾರತದಲ್ಲೇ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕ್ರಿಕೆಟಿಗರ ಮನೆ ಎಷ್ಟು ಕೋಟಿ ಬೆಲೆ ಬಾಳುತ್ತದೆ ಗೊತ್ತಾ?