Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಟೀಂ ಇಂಡಿಯಾ ಏಕದಿನ ಮಾದರಿಯಲ್ಲಿ ನ್ಯೂಜಿಲ್ಯಾಂಡ್ ಗಿಂತಲೂ ದರ್ಬಲವೇ?!

ಟೀಂ ಇಂಡಿಯಾ ಏಕದಿನ ಮಾದರಿಯಲ್ಲಿ ನ್ಯೂಜಿಲ್ಯಾಂಡ್ ಗಿಂತಲೂ ದರ್ಬಲವೇ?!
Dubai , ಸೋಮವಾರ, 6 ಫೆಬ್ರವರಿ 2017 (12:03 IST)
ದುಬೈ: ಇತ್ತೀಚೆಗೆ ಟೀಂ ಇಂಡಿಯಾ ಏಕದಿನ ಪಂದ್ಯಗಳ ಮಾದರಿಯಲ್ಲೂ ಭರ್ಜರಿ ಪ್ರದರ್ಶನ ತೋರುತ್ತಿದೆ. ಒಂದಾದ ಮೇಲೊಂದರಂತೆ ಸರಣಿ ಗೆಲ್ಲುತ್ತಿದೆ. ಆದರೂ ಶ್ರೇಯಾಂಕದಲ್ಲಿ ಅದಕ್ಕೆ ನಾಲ್ಕನೇ ಸ್ಥಾನ!

 
ಇತ್ತೀಚೆಗೆ ಬಿಡುಗಡೆಯಾದ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ನಾಲ್ಕನೇ ಸ್ಥಾನಕ್ಕೆ ಜಾರಿದೆ. ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಮೇಲೂ ನಾಲ್ಕನೇ ಸ್ಥಾನವೇ ಎಂದು ನಿಮಗನಿಸಬಹುದು. ಆದರೆ ಇದು ನಿಜ.

ಆಸ್ಟ್ರೇಲಿಯಾ 119 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. 118 ಅಂಕ ಪಡೆದ ದ. ಆಫ್ರಿಕಾ ದ್ವಿತೀಯ ಸ್ಥಾನದಲ್ಲಿದೆ. ಅದೂ ಈಗ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಗೆದ್ದರೆ ಆಸ್ಟ್ರೇಲಿಯಾವನ್ನು ತಳ್ಳಿ ಮೊದಲ ಸ್ಥಾನಕ್ಕೇರಲಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವೆ ನಡೆದ ಆಸ್ಟ್ರೇಲಿಯಾ ವಿರುದ್ಧ ಚಾಪೆಲ್ ಹ್ಯಾಡ್ಲೀ ಏಕದಿನ ಸರಣಿ ಸೋತಿದೆ. ಹೀಗಾಗಿ ಗೆದ್ದ ನ್ಯೂಜಿಲ್ಯಾಂಡ್ ಭಾರತವನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿದೆ.

ಆದರೆ ಭಾರತಕ್ಕೆ ತನ್ನ ಶ್ರೇಯಾಂಕ ಉತ್ತಮಪಡಿಸಲು ಸದ್ಯಕ್ಕೆ ಯಾವುದೇ ದಾರಿಯಿಲ್ಲ. ಯಾಕೆಂದರೆ  ಮುಂದೆ ಭಾರತ ಸೀಮಿತ ಓವರ್ ಗಳ ಪಂದ್ಯವನ್ನು ಆಡುವುದು ಚಾಂಪಿಯನ್ಸ್ ಟ್ರೋಫಿಯಲ್ಲೇ. ಅಲ್ಲಿಯವರೆಗೆ ಕಾಯಲೇ ಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಾನಿಯಾ ಮಿರ್ಜಾಗೆ ಇನ್ನೊಮ್ಮೆ ಮದುವೆಯಾಗುವ ಆಸೆ! ವರ ಯಾರು ಗೊತ್ತಾ?