ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ನಿಧಾನಗತಿಯ ಬ್ಯಾಟಿಂಗ್ ಮಾಡುತ್ತಿದ್ದು ಡ್ರಾ ಮಾಡಿಕೊಳ್ಳಲೆತ್ನಿಸುತ್ತಿದೆಯೇ ಎಂಬ ಅನುಮಾನ ಮೂಡಿದೆ.
ಮೂರನೇ ದಿನದಂತ್ಯಕ್ಕೆ ವಿಂಡೀಸ್ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತ್ತು. ಇನ್ನೂ ಭಾರತದ ಮೊದಲ ಇನಿಂಗ್ಸ್ ದಾಟಬೇಕಾದರೆ 209 ರನ್ ಗಳಿಸಬೇಕಿದೆ. ನಿನ್ನೆ ಮಳೆಯಿಂದಾಗಿ ಪಂದ್ಯ ಕೆಲವು ಕಾಲ ಸ್ಥಗಿತಗೊಂಡಿತ್ತು. ಹಾಗಿದ್ದರೂ ವಿಂಡೀಸ್ ನಿಧಾನಗತಿಯಲ್ಲಿ ರನ್ ಗಳಿಸಿದ್ದು ಸ್ಪಷ್ಟವಾಗಿದೆ.
ನಾಯಕ ಬ್ರಾತ್ ವೈಟ್ 75 ರನ್ ಗಳಿಸಿ ಔಟಾಗುವ ಮೊದಲು ಬರೋಬ್ಬರಿ 225 ಎಸೆತ ಎದುರಿಸಿದ್ದರು. ಎಲ್ಲಾ ಬ್ಯಾಟಿಗರದ್ದೂ ಇದೇ ಕತೆ. ಹೀಗಾಗಿ ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ವೆಸ್ಟ್ ಇಂಡೀಸ್ ಯತ್ನಿಸುತ್ತಿರುವಂತೆ ಕಾಣುತ್ತಿದೆ. ಭಾರತದ ಪರ ರವೀಂದ್ರ ಜಡೇಜಾ 2, ಅಶ್ವಿನ್, ಮುಕೇಶ್ ಕುಮಾರ್, ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್ ಕಬಳಿಸಿದ್ದಾರೆ.