ಅನಿಲ್ ಕುಂಬ್ಳೆ ನಿರ್ಗಮನದ ಬಳಿಕ ಟೀಮ್ ಇಂಡಿಯಾ ಹೆಡ್ ಕೋಚ್ ಸ್ಥಾನಕ್ಕೆ ಹೊಸಬರ ಆಯ್ಕೆಗೆ ಬಿಸಿಸಿಐ ಪ್ರಕ್ರಿಯೆ ಚುರುಕುಗೊಳಿಸಿದೆ. ಸೆಹ್ವಾಗ್, ಟಾಮ್ ಮೂಡಿ ಸೇರಿದಂತೆ ಹಲವು ರೇಸ್`ನಲ್ಲಿದ್ದಾರೆ. ಕೋಚ್ ಆಯ್ಕೆ ಕುರಿತಂತೆ ಬಿಸಿಸಿಐಗೆ ಸಲಹೆ ನೀಡುವುದಿಲ್ಲ, ಕೇಳಿದರೆ ಮಾತ್ರ ಅಭಿಪ್ರಾಯ ಹಂಚಿಕೊಳ್ಳುತ್ತೇವೆ ಎಂದಿದ್ದಾರೆ ನಾಯಕ ವಿರಾಟ್ ಕೊಹ್ಲಿ.
ವೆಸ್ಟ್`ಇಂಡಿಸ್ ವಿರುದ್ಧದ 3ನೇ ಏಕದಿನ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಸದ್ಯ, ನಮ್ಮ ಗಮನವೆಲ್ಲ ಏಕದಿನ ಸರಣಿ ಮೇಲಿದೆ. ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಕೋಚ್ ಆಯ್ಕೆ ಪ್ರಕ್ರಿಯೆ ಅದರ ಪಾಡಿಗೆ ಅದು ನಡೆಯುತ್ತಿದೆ. ಬಿಸಿಸಿಐ ಪ್ರಕ್ರಿಯೆಯನ್ನ ನಾವು ಗೌರವಿಸುತ್ತೇವೆ. ಬಿಸಿಸಿಐ ಕೇಳಿದರೆ ಮಾತ್ರ ನಮ್ಮ ತಂಡದ ಅಭಿಪ್ರಾಯವನ್ನ ನೀಡುತ್ತೇವೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಜೊತೆಗಿನ ಮನಸ್ತಾಪದಿಂದಾಗಿ ಇತ್ತೀಚೆಗೆ ಅನಿಲ್ ಕುಂಬ್ಳೆ ಟೀಮ್ ಇಂಡಿಯಾ ಹೆಡ್ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಕೋಚ್ ಆಯ್ಕೆ ಪ್ರಕ್ರಿಯೆಯನ್ನ ಬಿಸಿಸಿಐ ಆರಂಭಿಸಿದ್ದು, ದೊಡ್ಡ ಗಣೇಶ್, ವೀರೇಂದ್ರ ಸೆಹ್ವಾಗ್, ಲಾಲ್ ಚಂದ್ ರಜಪೂತ್, ರಿಚರ್ಡ್ ಪೈಬೂಸ್, ಟಾಮ್ ಮೂಡಿ, ರವಿಶಾಸ್ತ್ರೀ ಅರ್ಜಿ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ