ಕೋಲ್ಕೊತ್ತಾ: ನನಗೇ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಬರಬಹುದು ಎಂದುಕೊಂಡಿದ್ದೆ. ಆದರೆ ಬರಲಿಲ್ಲ.. ಹೀಗಂತ ಬಾಂಗ್ಲಾದೇಶ ವಿರುದ್ಧದ ಐತಿಹಾಸಿಕ ಗೆಲುವಿನ ಪಂದ್ಯದ ಬಳಿಕ ಕೊಹ್ಲಿ ಹೇಳಿದ್ದಾರೆ.
ಪ್ರಶಸ್ತಿ ಸಮಾರಂಭದಲ್ಲಿ ಕೊಹ್ಲಿ ಹೀಗ್ಯಾಕೆ ಹೇಳಿದರು ಗೊತ್ತೇ? ಈ ಪಂದ್ಯದ ಗೆಲುವಿಗೆ ಕೊಹ್ಲಿ ಶತಕದ ಇನಿಂಗ್ಸ್ ಮುಖ್ಯ ಕಾರಣವಾಗಿದ್ದು ನಿಜ. ಆದರೆ ಬಾಂಗ್ಲಾ ತಂಡವನ್ನು ಕಳಪೆ ಮೊತ್ತಕ್ಕೆ ಆಲೌಟ್ ಮಾಡಿ ಮೂರೇ ದಿನದೊಳಗೆ ಪಂದ್ಯ ಮುಗಿಯುವಂತೆ ಮಾಡಿದ ಸಾಧನೆ ವೇಗಿಗಳದ್ದು.
ಹೀಗಾಗಿ ಪ್ರಶಸ್ತಿ ಸಮಾರಂಭದಲ್ಲಿ ಕೊಹ್ಲಿ ಹೀಗೆ ಹೇಳಿದ್ದಾರೆ. ‘ನನಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೊಡಬಹುದು ಎಂದುಕೊಂಡಿದ್ದೆ. ಆದರೆ ಇದು ಬೌಲರ್ ಗಳಿಗೇ ಸಂದಾಯವಾಗಬೇಕು. ನನ್ನ ಪ್ರಕಾರ ಉಮೇಶ್ ಅಥವಾ ಇಶಾಂತ್ ಗೆ ಸಿಗಬೇಕಿತ್ತು. ಭಾರತದಲ್ಲಿ ಒಂಭತ್ತು ವಿಕೆಟ್ ಪಡೆಯುವುದು ಸುಲಭದ ಮಾತಲ್ಲ. ಇಶಾಂತ್ ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿದ್ದು ನನಗೆ ಖುಷಿಯಾಗಿದೆ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.