ಗುವಾಹಟಿ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬೀಡು ಬೀಸಾಗಿ ಬ್ಯಾಟ್ ಬೀಸಿದ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಜೋಡಿ ಹಲವು ದಾಖಲೆಗಳನ್ನು ಮಾಡಿದೆ.
ಈ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠರಾದರು. 140 ರನ್ ಗಳಿಸಿದ ಕೊಹ್ಲಿ ನಾಯಕರಾಗಿ 14 ನೇ ಶತಕ ದಾಖಲಿಸಿದರು. ಈ ಮೂಲಕ ನಾಯಕನಾಗಿ ಅತೀ ಹೆಚ್ಚು ಶತಕ ದಾಖಲಿಸಿದ ರಿಕಿ ಪಾಂಟಿಂಗ್ ನಂತರದ ಸ್ಥಾನ ಪಡೆದರು. ಅಷ್ಟೇ ಅಲ್ಲದೆ, ವಿಂಡೀಸ್ ವಿರುದ್ಧ ಗರಿಷ್ಠ ವೈಯಕ್ತಿಕ ರನ್ ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದರು.
ಇನ್ನು, ರೋಹಿತ್ ಶರ್ಮಾ 152 ರನ್ ಗಳಿಸಿ ವಿಂಡೀಸ್ ವಿರುದ್ಧ ಗರಿಷ್ಠ ವೈಯಕ್ತಿಕ ರನ್ ಗಳಿಸಿದವರ ಪೈಕಿ ದ್ವಿತೀಯ ಸ್ಥಾನ ಪಡೆದರು. ಮೊದಲ ಸ್ಥಾನ 219 ರನ್ ಗಳಿಸಿದ ವೀರೇಂದ್ರ ಸೆಹ್ವಾಗ್ ರದ್ದು. ಇನ್ನು ಆರನೇ ಬಾರಿ 150 ಪ್ಲಸ್ ರನ್ ಗಳಿಸಿದ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.