ಮುಂಬೈ: ಟೀಂ ಇಂಡಿಯಾ ನಾಯಕನ ಹುದ್ದೆ ಎನ್ನುವುದು ಎಷ್ಟು ಪವರ್ ಫುಲ್ ಎಂದರೆ ತಂಡದ ಕೋಚ್ ಆಯ್ಕೆ ಕೂಡಾ ಹೆಸರಿಗೆ ಮಾತ್ರ ಆಯ್ಕೆ ಸಮಿತಿ ಮಾಡಿದರೂ, ಅಂತಿಮವಾಗಿ ನಾಯಕನ ಅಭಿಪ್ರಾಯವೇ ಮುಖ್ಯವಾಗುತ್ತಿತ್ತು.
ಆದರೆ ಈ ಬಾರಿ ಟೀಂ ಇಂಡಿಯಾ ಕೋಚ್ ಆಯ್ಕೆ ಮಾಡುವಾಗ ನಾಯಕ ವಿರಾಟ್ ಕೊಹ್ಲಿಯ ಅಭಿಪ್ರಾಯ ಕೇಳುವ ಸಾಧ್ಯತೆಯಿಲ್ಲ ಎಂದು ಬಿಸಿಸಿಐ ಮೂಲಗಳು ಹೇಳಿವೆ.
ಕಳೆದ ಬಾರಿ ಕೋಚ್ ಆಗಿ ರವಿಶಾಸ್ತ್ರಿ ಆಯ್ಕೆ ಮಾಡಲೂ ಕೊಹ್ಲಿ ಒತ್ತಾಯವೇ ಕಾರಣ ಎನ್ನಲಾಗಿದೆ. ಆದರೆ ಈ ಬಾರಿ ಕಪಿಲ್ ದೇವ್ ನೇತೃತ್ವದ ಸಮಿತಿ ಕೋಚ್ ಆಯ್ಕೆ ಮಾಡುತ್ತಿದ್ದು, ಅವರು ಕೊಹ್ಲಿ ಅಭಿಪ್ರಾಯ ಕೇಳುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ಅಷ್ಟೇ ಅಲ್ಲ, ಕೋಚ್ ನ ಸಹಾಯಕ ಸಿಬ್ಬಂದಿಗಳನ್ನೂ ಈ ಸಮಿತಿಯೇ ನೇಮಕ ಮಾಡಲಿದೆ.