ಮುಂಬೈ: ನಾಯಕತ್ವದ ವಿಚಾರದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ದಿಗ್ಗಜ ನಾಯಕರಾದ ಸ್ಟೀವ್ ವಾ ಮತ್ತು ರಿಕಿ ಪಾಂಟಿಂಗ್ ರನ್ನೇ ಹಿಂದಿಕ್ಕುವ ಹಂತದಲ್ಲಿದ್ದಾರೆ.
ಈಗಾಗಲೇ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತೀಯ ಕ್ರಿಕೆಟ್ ನಾಯಕರ ಪೈಕಿಯೇ ಅತೀ ಹೆಚ್ಚು ಗೆಲುವು ದಾಖಲಿಸಿ ನಂ.1 ಪಟ್ಟಕ್ಕೇರಿರುವ ಕೊಹ್ಲಿ ಇದೀಗ ಜಾಗತಿಕ ದಾಖಲೆ ಮಾಡಲಿದ್ದಾರೆ.
ದ.ಆಫ್ರಿಕಾ ವಿರುದ್ಧ ಪುಣೆಯಲ್ಲಿ ಗೆಲುವು ಸಾಧಿಸುವುದರೊಂದಿಗೆ ಕೊಹ್ಲಿ ನಾಯಕರಾಗಿ 30 ನೇ ಗೆಲುವು ಕಂಡಿದ್ದಾರೆ. ಇದರೊಂದಿಗೆ ಜಾಗತಿಕವಾಗಿಯೂ ರಿಕಿ ಪಾಂಟಿಂಗ್ ಮತ್ತು ಸ್ಟೀವ್ ವಾ ಬಳಿಕ ಮೂರನೇ ಯಶಸ್ವೀ ನಾಯಕ ಎಂಬ ದಾಖಲೆ ಹೊಂದಿದ್ದಾರೆ. ಪಾಂಟಿಂಗ್ 77 ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿ 48 ಗೆಲುವು ಕಂಡಿದ್ದಾರೆ. ವಾ 57 ಪಂದ್ಯಗಳಿಂದ 41 ಗೆಲುವು ಕಂಡಿದ್ದಾರೆ. ಇದೀಗ ಕೊಹ್ಲಿ 50 ಪಂದ್ಯಗಳಿಂದ 30 ಗೆಲುವು ಕಂಡಿದ್ದಾರೆ. ಇದರೊಂದಿಗೆ ಕೊಹ್ಲಿ ಗೆಲುವಿನ ಶತಮಾನ ಶೇ.60 ರಷ್ಟಿದೆ. ಕೊಹ್ಲಿ ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ಜಾಗತಿಕವಾಗಿಯೂ ಅತೀ ಹೆಚ್ಚು ಗೆಲುವು ಕಂಡ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಬಹುದು.