Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪಾಕ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಾಡಿದ ತಪ್ಪುಗಳು

ಪಾಕ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಾಡಿದ ತಪ್ಪುಗಳು
ಓವಲ್ , ಸೋಮವಾರ, 19 ಜೂನ್ 2017 (07:33 IST)
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಕೋಟ್ಯಂತರ ಮಂದಿ ಭಾರತೀಯರ ನಿರೀಕ್ಷೆ ಹುಸಿಯಾಗಿದೆ. ಗೆಲ್ಲುವ ಫೇವರೀಟ್ ಆಗಿದ್ದ ಭಾರತ ತಂಡ ಹೀನಾಯವಾಗಿ ಸೋತು ಮುಖಭಂಗ ಅನುಭವಿಸಿದೆ. ಭಾರತ ಟಾಸ್ ಗೆದ್ದದ್ದನ್ನ ಬಿಟ್ಟರೆ ಬೇರಾವ ಹಂತದಲ್ಲೂ ಪಾಕಿಸ್ತಾನದ ವಿರುದ್ಧ ಮೇಲುಗೈ ಸಾಧಿಸಲಿಲ್ಲ. ನಾಯಕ ವಿರಾಟ್ ಕೊಹ್ಲಿ ಮಾಡಿದತಪ್ಪುಗಳೂ ಸಹ ಸೋಲಿನ ಹಣೆಬರಹ ಬರೆಯಿತು ಎಂದರೂ ತಪ್ಪಿಲ್ಲ..
 

1.ಬ್ಯಾಟಿಂಗ್ ಪಿಚ್`ನಲ್ಲಿ ಫೀಲ್ಡಿಂಗ್: ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಪಿಚ್`ನಲ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ತಪ್ಪು ಮಾಡಿದರು. ಹೈವೋಲ್ಟೇಜ್ ಪಂದ್ಯದಲ್ಲಿ ಚೇಸಿಂಗ್ ಕಷ್ಟವೆಂದು ಅರಿತಿದ್ದರೂ ಪಾಕ್`ಗೆ ಬ್ಯಾಟಿಂಗ್ ಬಿಟ್ಟುಕೊಟ್ಟು ತಪ್ಪು ಮಾಡಿದರು. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮಾಡಿದ ತಪ್ಪನ್ನ ನಿನ್ನೆ ಕೊಹ್ಲಿ ಮಾಡಿದರು.

2. ಪಾಕ್ ದಾಳಿ ಊಹಿಸುವಲ್ಲಿ ವಿಫಲ: ಪಾಕಿಸ್ತಾನ ವೇಗದ ಬೌಲರ್`ಗಳು ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾ ವಿರುದ್ಧ ಅಬ್ಬರಿಸಿ ಬೊಬ್ಬಿರಿದದ್ದನ್ನ ಕೊಹ್ಲಿ ಮನಗಾಣಬೇಕಿತ್ತು. ಅಮೀರ್, ಜುನೈದ್ ಖಾನ್ ದಾಳಿಗಳ ಬಗ್ಗೆ ಎಚ್ಚರಿಕೆವಹಿಸಬೇಕಿತ್ತು.

3. ಅನುಭವದ ಕೊರತೆ: ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಅಶ್ವಿನ್`ಗೆ ಮತ್ತೆ ಅವಕಾಶ ಕೊಟ್ಟಿದ್ದು ಕೊಹ್ಲಿಗೆ ದುಬಾರಿಯಾಯ್ತು. ಇಂಗ್ಲೆಂಡ್ ಪಿಚ್`ನಲ್ಲಿ ಪರಿಣಾಮಕಾರಿಯಾಗದ ಅಶ್ವಿನ್ ವಿಚಾರದಲ್ಲಿ ಕೊಹ್ಲಿ ಗಮನ ಹರಿಸಬೇಕಿತ್ತು. ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ಗಮನ ಸೆಳೆದಿದ್ದ ಉಮೇಶ್ ಯಾದವ್ ಅವರನ್ನ ಕಣಕ್ಕಿಳಿಸಬೇಕಿತ್ತು.

4. ಲಘುವಾಗಿ ಪರಿಗಣನೆ: ಮೊದಲ ಪಂದ್ಯ ಗೆದ್ದಿದ್ದ ಭಾರತ ತಂಡ ಅದೇ ಆತ್ಮವಿಶ್ವಾಸದಲ್ಲಿತ್ತು. ಫೈನಲ್ ಪಂದ್ಯದಲ್ಲಿ ಪಾಕ್ ಹೊಸ ಪ್ರತಿಭೆಗಳನ್ನ ಕಣಕ್ಕಿಳಿಸಿದಾಗ ಭಾರತ ಎಚ್ಚರಿಕೆ ವಹಿಸಬೇಕಿತ್ತು.

5.   ಬೆದರಿದ ಟೀಮ್ ಇಂಡಿಯಾ: ಹೈವೋಲ್ಟೇಜ್ ಗೇಮ್`ನಲ್ಲಿ ಕೊಹ್ಲಿ ಪಡೆ ಲಯ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.ಮೊಹಮ್ಮದ್ ಅಮೀರ್ ಎಸೆಯುತ್ತಿದ್ದ ಬೆಂಕಿಯಂಥಾ ಚೆಂಡುಗಳಿಗೆ ತಕ್ಕ ಉತ್ತರ ನೀಡಬೇಕಿದ್ದ ಟಾಪ್ ಆರ್ಡರ್ ಬ್ಯಾಟ್ಸ್`ಮನ್`ಗಳು ನರ್ವಸ್ ಆಗಿಬಿಟ್ಟರು. ಧವನ್, ಪಾಂಡ್ಯಾ ಬಿಟ್ಟರೆ ಬೇರಾರೂ ಫೈಟಿಂಗ್ ಸ್ಪಿರಿಟ್ ತೋರಿಲ್ಲ. ಚೇಸಿಂಗ್ ಕಿಂಗ್ ಕೊಹ್ಲಿ ಒತ್ತಡದ ಪಂದ್ಯದಲ್ಲಿ ಮಕಾಡೆ ಮಲಗಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಪಾಕ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು