Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತ-ಬಾಂಗ್ಲಾ ಹೊನಲು ಬೆಳಕು ಟೆಸ್ಟ್ ನೋಡಲೇಬೇಕಾದ ಈ ಮೂರು ಕಾರಣಗಳು

ಭಾರತ-ಬಾಂಗ್ಲಾ ಹೊನಲು ಬೆಳಕು ಟೆಸ್ಟ್ ನೋಡಲೇಬೇಕಾದ ಈ ಮೂರು ಕಾರಣಗಳು
ಕೋಲ್ಕೊತ್ತಾ , ಶುಕ್ರವಾರ, 22 ನವೆಂಬರ್ 2019 (08:57 IST)
ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಇಂದಿನಿಂದ ಹೊನಲು ಬೆಳಕಿನಲ್ಲಿ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಈ ಪಂದ್ಯವನ್ನು ನೀವು ನೋಡಲು ಮೂರು ಕಾರಣಗಳು ಸಾಕು.


ಇದು ಭಾರತ ಮತ್ತು ಬಾಂಗ್ಲಾ ಪಾಲಿಗೆ ಮೊದಲ ಹೊನಲು ಬೆಳಕಿನ ಟೆಸ್ಟ್ ಪಂದ್ಯವಾಗಿರುವುದರಿಂದ ವೀಕ್ಷಕರ ಸಂಖ್ಯೆಯೂ ಹೆಚ್ಚಲಿದೆ. ಜತೆಗೆ ಈ ಐತಿಹಾಸಿಕ ಪಂದ್ಯ ನೋಡಲು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ.ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಗಣ್ಯಾತಿಗಣ್ಯರೇ ಆಗಮಿಸುತ್ತಿದ್ದಾರೆ.

ಈ ಪಂದ್ಯದಲ್ಲಿ ಬಿಸಿಸಿಐ ಟೀಂ ಇಂಡಿಯಾದ ಮಾಜಿ ಟೆಸ್ಟ್ ನಾಯಕರನ್ನು ಗೌರವಿಸಲು ತೀರ್ಮಾನಿಸಿದೆ. ಅಲ್ಲದೆ, ಮಾಜಿ ನಾಯಕರ ಕಾಮೆಂಟರಿಗಳೂ ಇರಲಿವೆ.

ಇದಲ್ಲದೆ, ಈ ಪಂದ್ಯ ಆರಂಭಕ್ಕೆ ಮುನ್ನ ಭಾರತೀಯ ಸೈನಿಕರು ರಾಷ್ಟ್ರಗೀತೆ ನುಡಿಸಿ ಪಿಂಕ್ ಬಾಲ್ ನ್ನು ಉಭಯ ನಾಯಕರಿಗೆ ನೀಡಲಿದ್ದಾರೆ. ಈ ವಿಶೇಷ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಪಂದ್ಯ ವೀಕ್ಷಿಸಲೇಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಬಾಂಗ್ಲಾ ಹೊನಲು ಬೆಳಕು ಟೆಸ್ಟ್: ಟೀಂ ಇಂಡಿಯಾಗೆ ಕಾದಿದೆ ದಾಖಲೆ