ಮುಂಬೈ: ಟೀಂ ಇಂಡಿಯಾದಲ್ಲಿ ಕೆಲವು ಹಿರಿಯ ಕ್ರಿಕೆಟಿಗರು ಟಿ20 ಕ್ರಿಕೆಟ್ ನಿಂದ ನಿವೃತ್ತಿಯಾಗುವ ಸಾಧ‍್ಯತೆಯಿದೆ. ಈ ಪೈಕಿ ಮೂವರು ಕ್ರಿಕೆಟಿಗರ ಹೆಸರು ಬಲವಾಗಿ ಕೇಳಿಬರುತ್ತಿದೆ.
ರೋಹಿತ್ ಶರ್ಮಾ: ಟಿ20 ಕ್ರಿಕೆಟ್ ನಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರೂ ಕಿರಿಯರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ರೋಹಿತ್ ಟಿ20 ಕ್ರಿಕೆಟ್ ನಿಂದ ದೂರ ಸರಿಯುವ ಸಾಧ್ಯತೆಯಿದೆ. ಸದ್ಯಕ್ಕೆ ಅವರಿಗೆ 35 ವರ್ಷ. ಕಿರು ಮಾದರಿ ಕ್ರಿಕೆಟ್ ನಲ್ಲಿ ಹೊಸ ನಾಯಕನನ್ನು ಬೆಳೆಸಿದರೆ ಮುಂದೆ ದೀರ್ಘಾವಧಿ ನಾಯಕತ್ವಕ್ಕೂ ಅನುಕೂಲವಾಗಬಹುದು ಎಂಬ ದೃಷ್ಟಿಯಿಂದ ಅವರು ನಿವೃತ್ತಿಯಾದರೂ ಅಚ್ಚರಿಯಿಲ್ಲ.
ಶಿಖರ್ ಧವನ್: ಶಿಖರ್ ಧವನ್ ಈಗಾಗಲೇ ಟಿ20 ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುತ್ತಿಲ್ಲ. ಹಾಗಿದ್ದರೂ ಅಧಿಕೃತವಾಗಿ ನಿವೃತ್ತಿ ಘೋಷಿಸಿಲ್ಲ. ಒಂದು ವೇಳೆ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದೇ ಹೋದರೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಬಹುದು.
ವಿರಾಟ್ ಕೊಹ್ಲಿ: ಸದ್ಯಕ್ಕೆ ಕಳಪೆ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಕೊಹ್ಲಿ ಮುಂದೆ ಯುವಕರಿಗೆ ಸ್ಥಾನ ಬಿಟ್ಟುಕೊಡುವ ಉದ್ದೇಶದಿಂದ ಕ್ರಿಕೆಟ್ ನಿಂದ ದೂರ ಸರಿಯುವ ಸಾಧ್ಯತೆಯಿದೆ. ಈಗಾಗಲೇ ಕೊಹ್ಲಿ ಬಹುತೇಕ ಟಿ20 ಸರಣಿಗಳಿಂದ ಹೊರಗುಳಿದಿದ್ದಾರೆ. ಹೀಗಾಗಿ ವಿಶ್ವಕಪ್ ಬಳಿಕ ಟಿ20 ಕ್ರಿಕೆಟ್ ನಿಂದ ನಿವೃತ್ತಿಯಾದರೂ ಅಚ್ಚರಿಯಿಲ್ಲ.