ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಸೋಲುತ್ತಿದ್ದ ಪಂದ್ಯವನ್ನು ಟೀಂ ಇಂಡಿಯಾ ರೋಚಕವಾಗಿ 6 ರನ್ ಗಳಿಂದ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್ ಅರ್ಧಶತಕಗಳ ನೆರವಿನಿಂದ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ರಾಹುಲ್ 57 ರನ್ ಗಳಿಸಿ ಔಟಾದರೆ ಸೂರ್ಯ 50 ರನ್ ಗೆ ವಿಕೆಟ್ ಒಪ್ಪಿಸಿದರು.
ಈ ಮೊತ್ತ ಬೆನ್ನತ್ತಿದ ಆಸ್ಟ್ರೇಲಿಯಾದ ಆರಂಭ ಉತ್ತಮವಾಗಿತ್ತು. ಮಿಚೆಲ್ ಮಾರ್ಷ್ 35 ರನ್ ಗಳಿಸಿದರೆ ನಾಯಕ ಏರಾನ್ ಫಿಂಚ್ ಬಿರುಸಿನ 76 ರನ್ ಗಳಿಸಿದರು. ಈ ಹಂತದಲ್ಲಿ ಆಸ್ಟ್ರೇಲಿಯಾ ಸುಲಭವಾಗಿ ಪಂದ್ಯ ಗೆಲ್ಲುತ್ತದೆ ಎಂದೇ ಎಲ್ಲರೂ ಊಹಿಸಿದ್ದರು. ಆದರೆ ಕೊನೆಯ ಓವರ್ ನಲ್ಲಿ ಎಲ್ಲವೂ ಬದಲಾಯಿತು. ಟಿಮ್ ಡೇವಿಡ್ ರನ್ನು 5 ರನ್ ಗಳಿಸಿದ್ದಾಗ ಕೊಹ್ಲಿ ನೇರ ಎಸೆತದ ಮೂಲಕ ರನೌಟ್ ಮಾಡಿದರು. ಬಳಿಕ ಬಂದ ಎಲ್ಲಾ ಬ್ಯಾಟಿಗರದ್ದೂ ಸಿಂಗಲ್ ಅಂಕಿ ಕೊಡುಗೆ. ಕೊನೆಯ ಓವರ್ ಎಸೆದ ಮೊಹಮ್ಮದ್ ಶಮಿ ಎರಡು ವಿಕೆಟ್ ಕಬಳಿಸುವುದರೊಂದಿಗೆ ಆಸ್ಟ್ರೇಲಿಯಾವನ್ನು 20 ಓವರ್ ಗಳಲ್ಲಿ 180 ರನ್ ಗೆ ಆಲೌಟ್ ಮಾಡಿದರು. ಇದರೊಂದಿಗೆ ಟೀಂ ಇಂಡಿಯಾ ರೋಚಕವಾಗಿ ಗೆಲುವು ಸಾಧಿಸಿ ವಿಶ್ವಕಪ್ ಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು.
-Edited by Rajesh Patil