ಮುಂಬೈ: ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿ ಆಡಲಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ ತಂಡ ಇಂಗ್ಲೆಂಡ್ ವಿರುದ್ಧವೂ ಟಿ20 ಸರಣಿ ಆಡುವ ಸಾಧ್ಯತೆಯಿದೆ.
ಹೀಗಾದಲ್ಲಿ ಇಂಗ್ಲೆಂಡ್ ಸರಣಿಗೂ ಪ್ರಮುಖ ಆಟಗಾರರು ಗೈರಾಗುವ ಸಾಧ್ಯತೆಯಿದೆ. ಇಂಗ್ಲೆಂಡ್ ವಿರುದ್ಧ ಬಾಕಿ ಉಳಿದಿದ್ದ ಏಕೈಕ ಟೆಸ್ಟ್ ಪಂದ್ಯವನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಜುಲೈ 1 ರಿಂದ ಆಡಲಿದೆ. ಈ ಪಂದ್ಯ ಜುಲೈ 5ರವರೆಗೆ ನಡೆಯಲಿದೆ.
ಜುಲೈ 7 ರಿಂದ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ನಿಗದಿಯಾಗಿದೆ. ಟೆಸ್ಟ್ ಪಂದ್ಯ ಮುಗಿದು ಎರಡೇ ದಿನಕ್ಕೆ ಟಿ20 ಸರಣಿಗೆ ಹೊಂದಿಕೊಳ್ಳುವುದು ಆಟಗಾರರಿಗೆ ಕಷ್ಟವಾಗಬಹುದು. ಹೀಗಾಗಿ ಐರ್ಲೆಂಡ್ ವಿರುದ್ಧ ಜೂನ್ 28 ರಂದು ಟಿ20 ಸರಣಿ ಮುಗಿಸಲಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ಯುವ ಪಡೆಯೇ ಇಂಗ್ಲೆಂಡ್ ವಿರುದ್ಧವೂ ಟಿ20 ಪಂದ್ಯ ಆಡುವ ಸಾಧ್ಯತೆಯಿದೆ ಎನ್ನಲಾಗಿದೆ.