ಅಹಮ್ಮದಾಬಾದ್: ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ನಾಳೆ ನಡೆಯಲಿರುವ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅಂಪಾಯರ್ ಆಗಿ ರಿಚರ್ಡ್ ಕೆಟಲ್ ಬರೋ ಆಯ್ಕೆಯಾಗಿದ್ದಾರೆ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಕಾರಣ ರಿಚರ್ಡ್ ಕೆಟಲ್ ಬರೊ ಅಂಪಾಯರ್ ಆಗಿ ಕಾರ್ಯನಿರ್ವಹಿಸಿದ್ದ ಪ್ರಮುಖ ಪಂದ್ಯಗಳನ್ನೆಲ್ಲಾ ಭಾರತ ಸೋತಿದೆ. ಹೀಗಾಗಿ ಇವರು ಟೀಂ ಇಂಡಿಯಾ ಪಾಲಿಗೆ ದುರಾದೃಷ್ಟ ಎಂದೇ ಅಭಿಮಾನಿಗಳು ಅಂದುಕೊಂಡಿದ್ದಾರೆ.
2014 ರ ಟಿ20 ವಿಶ್ವಕಪ್, 2015 ಏಕದಿನ ವಿಶ್ವಕಪ್, 2016 ಟಿ20 ವಿಶ್ವಕಪ್, 2017 ರ ಚಾಂಪಿಯನ್ಸ್ ಟ್ರೋಫಿ, 2019 ರ ಏಕದಿನ ವಿಶ್ವಕಪ್, 2023 ರ ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕೆ ಇವರೇ ಅಂಪಾಯರ್ ಆಗಿದ್ದರು. ಆಗೆಲ್ಲಾ ಭಾರತ ಸೋತಿದೆ. ಹೀಗಾಗಿ ನಾಳೆಯ ಪಂದ್ಯಕ್ಕೆ ಅವರು ಅಂಪಾಯರ್ ಅಂದ ಕೂಡಲೇ ಅಭಿಮಾನಿಗಳಲ್ಲಿ ಆತಂಕ ಮೂಡಿದೆ.
ಇದು ಒಂದು ರೀತಿಯ ನಂಬಿಕೆಯಿರಬಹುದು. ಆದರೆ ಅವರು ಅಂಪಾಯರಿಂಗ್ ಮಾಡಿರುವ ಮಹತ್ವದ ಪಂದ್ಯಗಳಲ್ಲೆಲ್ಲಾ ಟೀಂ ಇಂಡಿಯಾ ಸೋತಿರುವುದು ದುರಾದೃಷ್ಟ ಎಂದು ಅಭಿಮಾನಿಗಳ ನಂಬಿಕೆ. ಇದೀಗ ನಾಳೆಯ ಪಂದ್ಯಕ್ಕೂ ಅವರೇ ಅಂಪಾಯರ್ ಆಗಿದ್ದಾರೆ. ಕಳೆದ ಪಂದ್ಯದಲ್ಲಿ ಅವರು ಅಂಪಾಯರ್ ಆಗಿದ್ದರೂ ಫೀಲ್ಡ್ ಅಂಪಾಯರ್ ಆಗಿರಲಿಲ್ಲ. ಆದರೆ ಈ ಬಾರಿ ಫೀಲ್ಡ್ ಅಂಪಾಯರ್ ಆಗಿದ್ದಾರೆ. ಹೀಗಾಗಿ ಮತ್ತೆ ಕೆಟ್ಟ ಗಳಿಗೆ ಮರುಕಳಿಸದಿರಲಿ ಎಂದೇ ಅಭಿಮಾನಿಗಳ ಹಾರೈಕೆ.