ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರಿಗೆ ಇನ್ನು ಮೂರೂವರೆ ತಿಂಗಳ ಕಾಲ ನಾನ್ ಸ್ಟಾಪ್ ಕ್ರಿಕೆಟ್ ಟೂರ್ನಮೆಂಟ್ ಇದೆ. ಇದರಿಂದಾಗಿ ಕ್ರಿಕೆಟಿಗರು ಬಿಡುವಿಲ್ಲದೇ ಕ್ರಿಕೆಟ್ ಆಡಬೇಕಿದೆ.
ಕೊರೋನಾ ಬ್ರೇಕ್ ನ ಬಳಿಕ ಆಟಗಾರರು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಬೇಕಿದೆ. ಇನ್ನೊಂದೆಡೆ ಇನ್ನೊಂದು ತಂಡ ಶ್ರೀಲಂಕಾದಲ್ಲಿ ಸೀಮಿತ ಓವರ್ ಗಳ ಸರಣಿ ಆಡಲಿದೆ. ಅದರ ಜೊತೆಗೆ ಸೆಪ್ಟೆಂಬರ್ ನಲ್ಲಿ ಐಪಿಎಲ್ ಕೂಡಾ ಇರುವುದರಿಂದ ಕ್ರಿಕೆಟಿಗರು ಬಿಡುವಿಲ್ಲದೇ ಕ್ರಿಕೆಟ್ ಆಡಬೇಕಿದೆ.
ಕಳೆದ ವರ್ಷವೂ ಇದೇ ರೀತಿ ಆಗಿತ್ತು. ಇದರಿಂದಾಗಿ ಆಸ್ಟ್ರೇಲಿಯಾ ಸರಣಿಯ ವೇಳೆಗೆ ಹೆಚ್ಚಿನ ಕ್ರಿಕೆಟಿಗರು ಗಾಯಾಳುಗಳಾಗಿ ಗೂಡು ಸೇರಿಕೊಂಡಿದ್ದಾರೆ. ಬಿಡುವಿಲ್ಲದ ಕ್ರಿಕೆಟ್ ಆಟಗಾರರ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ಮಂಡಳಿಗಳು ತಮಗೆ ಆಗುವ ನಷ್ಟ ಭರ್ತಿ ಮಾಡುವ ಬಗ್ಗೆ ಮಾತ್ರ ಯೋಚನೆ ಮಾಡುತ್ತಿರುವುದು ವಿಪರ್ಯಾಸ.