ಮುಂಬೈ: ಅನಿಲ್ ಕುಂಬ್ಳೆ ಮತ್ತು ವಿರಾಟ್ ಕೊಹ್ಲಿ ನಡುವಿನ ವೈಮನಸ್ಯದ ನಂತರ ಬಿಸಿಸಿಐ ಎಚ್ಚೆತ್ತುಕೊಂಡಿದೆ. ಹೀಗಾಗಿ ಹೊಸದಾಗಿ ತಂಡಕ್ಕೆ ವೃತ್ತಿಪರ ಮ್ಯಾನೇಜರ್ ನನ್ನು ನೇಮಕ ಮಾಡಲು ಹೊರಟಿದ್ದು, ಅವರಿಗೆ ಒಂದು ವಿಶೇಷ ಯೋಗ್ಯತೆ ಇರಬೇಕಂತೆ!
ಅದೇನದು ಅಂತೀರಾ? ದೆಹಲಿ ಮತ್ತು ಮುಂಬೈಯಲ್ಲಿ ಸಂದರ್ಶನ ನಡೆಸಿ ಇದೀಗ 12 ಮಂದಿಯ ಹೆಸರನ್ನು ಮ್ಯಾನೇಜರ್ ಹುದ್ದೆಗೆ ಅಂತಿಮಗೊಳಿಸಲಾಗಿದೆ. ಇವರಲ್ಲಿ ಒಬ್ಬರು ನೇಮಕವಾಗುತ್ತಾರೆ. ಆದರೆ ಸಂದರ್ಶನದಲ್ಲಿ ಇವರಿಗೆ ಕೇಳಿದ ಪ್ರಮುಖ ಪ್ರಶ್ನೆಯೆಂದರೆ ಅನಿಲ್ ಕುಂಬ್ಳೆ ಮತ್ತು ಕೊಹ್ಲಿ ವಿವಾದದಂತಹ ವಿವಾದವನ್ನು ಹೇಗೆ ಬಗೆಹರಿಸುತ್ತೀರಿ? ಎಂದಾಗಿತ್ತು.
ಕೊಹ್ಲಿ-ಕುಂಬ್ಳೆ ವಿವಾದ ಸಣ್ಣ ಮಟ್ಟದಲ್ಲಿರುವಾಗಲೇ ಆಗ ತಂಡದ ವ್ಯವಸ್ಥಾಪಕರೆನಿಸಿಕೊಂಡವರು ಬಿಸಿಸಿಐಗೆ ವಿಷಯ ತಿಳಿಸದೇ ಇದ್ದ ಕಾರಣ ವಿವಾದ ದೊಡ್ದದಾಯಿತು. ಇದೇ ಕಾರಣಕ್ಕೆ ಇದೀಗ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ ವೃತ್ತಿಪರ ಮ್ಯಾನೇಜರ್ ನನ್ನು ನೇಮಕ ಮಾಡಲು ಹೊರಟಿದೆ. ಅವರಿಗೆ ಇರಬೇಕಾದ ದೊಡ್ಡ ಮಾನದಂಡವೆಂದರೆ ಕೋಚ್ ಮತ್ತು ನಾಯಕನ ನಡುವಿನ ವೈಮನಸ್ಯ, ತಾಳ ಮೇಳವನ್ನು ಗುರುತಿಸುವುದು ಮತ್ತು ನಿಭಾಯಿಸುವುದಾಗಿರುತ್ತದಂತೆ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ