ಲಂಡನ್: ವಿಶ್ವಕಪ್ ಕ್ರಿಕೆಟ್ ಟೂರ್ನಿಯ ದ್ವಿತೀಯ ಅಭ್ಯಾಸ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶ ವಿರುದ್ಧ 95 ರನ್ ಗಳ ಭರ್ಜರಿ ಗೆಲುವು ಗಳಿಸಿದೆ.
ಇದರೊಂದಿಗೆ ಟೀಂ ಇಂಡಿಯಾಗೆ ವಿಶ್ವಕಪ್ ಗೆ ಮೊದಲು ಗೆಲುವಿನ ಆತ್ಮವಿಶ್ವಾಸ ದೊರತಿದೆ. ಭಾರತ ಮೊದಲು ಬ್ಯಾಟಿಂಗ್ ಮಾಡಿ ಕೆಎಲ್ ರಾಹುಲ್ (108) ಮತ್ತು ಧೋನಿ (113) ಶತಕದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 359 ರನ್ ಗಳಿಸಿತು.
ಈ ಬೃಹತ್ ಮೊತ್ತ ಬೆನ್ನತ್ತಿದ ಬಾಂಗ್ಲಾದೇಶ 49.3 ಓವರ್ ಗಳಲ್ಲಿ 264 ರನ್ ಗಳಿಗೆ ಆಲೌಟ್ ಆಯಿತು. ಎಲ್ಲಕ್ಕಿಂತ ಮುಖ್ಯವಾಗಿ ಭಾರತಕ್ಕೆ ಈ ಪಂದ್ಯದ ಮೂಲಕ ತನ್ನ ಬ್ಯಾಟಿಂಗ್ ಸಾಮರ್ಥ್ಯ ಒರೆಗೆ ಹಚ್ಚಲು ಸಾಧ್ಯವಾಯಿತು. ಅದರಲ್ಲೂ ಫಾರ್ಮ್ ಇಲ್ಲದೇ ಒದ್ದಾಡುತ್ತಿದ್ದ ಕೆಎಲ್ ರಾಹುಲ್ ಫಾರ್ಮ್ ಗೆ ಮರಳಿದ್ದು ನಾಲ್ಕನೇ ಕ್ರಮಾಂಕದ ಆಟಗಾರನ ತಲೆನೋವು ಮರೆಸಿದಂತಾಗಿದೆ. ಜೂನ್ 5 ರಂದು ಟೀಂ ಇಂಡಿಯಾ ವಿಶ್ವಕಪ್ ಕೂಟದ ಮೊದಲ ಪಂದ್ಯವನ್ನು ದ.ಆಫ್ರಿಕಾ ವಿರುದ್ಧ ಆಡಲಿದೆ.