ಡೊಮಿನಿಕಾ: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಮತ್ತು 141 ರನ್ ಗಳ ಅಂತರದಿಂದ ಗೆದ್ದ ಟೀಂ ಇಂಡಿಯಾ ಹಲವು ದಾಖಲೆಗಳನ್ನೂ ತನ್ನದಾಗಿಸಿಕೊಂಡಿದೆ.
ಮೊದಲ ಇನಿಂಗ್ಸ್ ನಲ್ಲಿ 5, ಎರಡನೇ ಇನಿಂಗ್ಸ್ ನಲ್ಲಿ 7 ವಿಕೆಟ್ ಪಡೆದ ರವಿಚಂದ್ರನ್ ಅಶ್ವಿನ್ ಒಂದು ಪಂದ್ಯದಲ್ಲಿ 8 ನೇ ಬಾರಿಗೆ 10 ಪ್ಲಸ್ ವಿಕೆಟ್ ಪಡೆದಿದ್ದು, ಅನಿಲ್ ಕುಂಬ್ಳೆ ದಾಖಲೆಯನ್ನು ಸರಿಗಟ್ಟಿದರು. ಒಂದೇ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲಿ ಅತೀ ಹೆಚ್ಚು ಬಾರಿ ಐದು ಪ್ಲಸ್ ವಿಕೆಟ್ ಪಡೆದ ವಿಶ್ವ ಬೌಲರ್ ಗಳ ಪಟ್ಟಿಯಲ್ಲಿ ಅಶ್ವಿನ್ ಈಗ ನಾಲ್ಕನೇ ಸ್ಥಾನಕ್ಕೇರಿದರು.
ವಿಂಡೀಸ್ ವಿರುದ್ಧ 141 ರನ್ ಮತ್ತು ಇನಿಂಗ್ಸ್ ಅಂತರದಿಂದ ಗೆದ್ದ ಟೀಂ ಇಂಡಿಯಾಗೆ ಇದು ಏಷ್ಯಾ ಹೊರಗೆ ಐದನೇ ಅತೀ ದೊಡ್ಡ ಗೆಲುವಾಗಿದೆ. ಇನ್ನು, ವಿಂಡೀಸ್ ವಿರುದ್ಧ ಟೀಂ ಇಂಡಿಯಾದ 23 ನೇ ಗೆಲುವು ಇದಾಗಿದ್ದು, ಆಸೀಸ್ ವಿರುದ್ಧ 32, ಇಂಗ್ಲೆಂಡ್ ವಿರುದ್ಧ 31 ಗೆಲುವು ದಾಖಲಿಸಿದೆ.