ಮುಂಬೈ: ಮುಂಬರುವ ವಿಶ್ವಕಪ್ ಕೂಟಕ್ಕೆ ಟೀಂ ಇಂಡಿಯಾಕ್ಕೆ ಆಯ್ಕೆಯಾದ ಕ್ರಿಕೆಟಿಗರು ಇದೀಗ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ವಿಶ್ವಕಪ್ ಗೆ ಆಯ್ಕೆಯಾದ ಆಟಗಾರರ ಪೈಕಿ ಧೋನಿ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಬಿಟ್ಟರೆ ಉಳಿದೆಲ್ಲಾ ಆಟಗಾರರೂ ಕಳಪೆ ಫಾರ್ಮ್ ನಲ್ಲಿದ್ದಾರೆ.
ರೋಹಿತ್ ಶರ್ಮಾ ಐಪಿಎಲ್ ನಲ್ಲಿ ಇದುವರೆಗೆ ಹೇಳಿಕೊಳ್ಳುವಂತಹ ಇನಿಂಗ್ಸ್ ಆಡಿಲ್ಲ. ಶಿಖರ್ ಧವನ್ ಒಂದೆರಡು ಪಂದ್ಯದಲ್ಲಿ ಚೆನ್ನಾಗಿ ಆಡಿದ್ದಾರೆ. ಇನ್ನು ಆಲ್ ರೌಂಡರ್ ಸ್ಥಾನಕ್ಕೆ ಆಯ್ಕೆಯಾದ ರವೀಂದ್ರ ಜಡೇಜಾ ಬ್ಯಾಟಿಂಗ್ ಮರೆತಿದ್ದಾರೆ. ಸ್ಪಿನ್ನರ್ ಕುಲದೀಪ್ ಯಾದವ್ ಬ್ಯಾಟ್ಸ್ ಮನ್ ಗಳಿಂದ ಮನಸೋ ಇಚ್ಛೆ ದಂಡಿಸಿಕೊಳ್ಳುತ್ತಿದ್ದಾರೆ. ದಿನೇಶ್ ಕಾರ್ತಿಕ್ ಗೆ ಕಳಪೆ ಫಾರ್ಮ್ ನಿಂದಾಗಿ ಕೆಕೆಆರ್ ತಂಡವೇ ಬ್ರೇಕ್ ಕೊಡಲು ಚಿಂತನೆ ನಡೆಸಿದೆ.
ಹೀಗಿರುವಾಗ ವಿಶ್ವಕಪ್ ತಂಡಕ್ಕೆ ಕಡೆಗಣಿಸಲ್ಪಟ್ಟ ರಿಷಬ್ ಪಂತ್ ಭರ್ಜರಿ ಫಾರ್ಮ್ ಪ್ರದರ್ಶಿಸಿ ಟಾಂಗ್ ಕೊಡುತ್ತಿದ್ದಾರೆ. ಹೀಗಿರುವಾಗ ಈ ತಂಡ ವಿಶ್ವಕಪ್ ಗೆಲ್ಲಲು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ ಎನ್ನುವುದಂತೂ ನಿಜ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ