Webdunia - Bharat's app for daily news and videos

Install App

ಮತ್ತದೇ ಫೈನಲ್ ಓವರ್ ಟೆನ್ಷನ್: ಟೀಂ ಇಂಡಿಯಾಕ್ಕೆ ನಂಬಲಸಾಧ್ಯ ಗೆಲುವು

Webdunia
ಶುಕ್ರವಾರ, 31 ಜನವರಿ 2020 (16:41 IST)
ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ನಾಲ್ಕನೇ ಟಿ20 ಪಂದ್ಯವೂ ಟೈ ಆಗಿ ಸೂಪರ್ ಓವರ್ ನಲ್ಲಿ ಪಂದ್ಯ ಟೀಂ ಇಂಡಿಯಾ ಪಾಲಾಯಿತು. ಇದರೊಂದಿಗೆ ಮತ್ತೆ ನ್ಯೂಜಿಲೆಂಡ್ ಫೈನಲ್ ಓವರ್ ನಲ್ಲಿ ಮುಗ್ಗರಿಸುವ ಚಾಳಿ ಮುಂದುವರಿಸಿತು.


ಅಂತಿಮ ಓವರ್ ನಲ್ಲಿ ಕೀವೀಸ್ ಗೆ ಗೆಲ್ಲಲು ಆರು ಎಸೆತಗಳಲ್ಲಿ 7 ರನ್ ಬೇಕಾಗಿತ್ತು. ಮೊದಲ ಬಾಲ್ ನಲ್ಲೇ ಕಳೆದ ಪಂದ್ಯದಂತೇ ರಾಸ್ ಟೇಲರ್ ವಿಕೆಟ್ ಒಪ್ಪಿಸಿ ನಡೆದರು. ಮೂರನೇ ಎಸೆತದಲ್ಲಿ ಭರ್ಜರಿಯಾಗಿ ಆಡುತ್ತಿದ್ದ ಸೀಫರ್ಟ್ ರನೌಟ್ ಆಗಿ ನಡೆದರು. ಈ ವೇಳೆ ನ್ಯೂಜಿಲೆಂಡ್ 2 ಎಸೆತಗಳಲ್ಲಿ 2 ರನ್ ಬೇಕಾಗಿತ್ತು. ಮುಂದಿನ ಎಸೆತದಲ್ಲಿ ಡೆರಿಲ್ ಮಿಚೆಲ್ ಕೂಡಾ ವಿಕೆಟ್ ಒಪ್ಪಿಸಿ ನಡೆದಾಗ 2 ರನ್ 1 ಬಾಲ್ ಎನ್ನುವ ಸ್ಥಿತಿ ನ್ಯೂಜಿಲೆಂಡ್ ನಿದ್ದಾಯಿತು.  ಕೊನೆಯ ಎಸೆತದಲ್ಲಿ ಎರಡನೇ ರನ್ ಗಾಗಿ ಓಡುತ್ತಿದ್ದಾಗ ಸ್ಯಾಂಟ್ನರ್ ರನೌಟ್ ಆದರು. ಇದರಿಂದಾಗಿ ಪಂದ್ಯ ಟೈ ಆಗಿ ಸೂಪರ್ ಓವರ್ ಜಾರಿ ಮಾಡಲಾಯಿತು.

ಮತ್ತೆ ಈ ಬಾರಿಯೂ ಬುಮ್ರಾ ಭಾರತದ ಪರ ಸೂಪರ್ ಓವರ್ ನಲ್ಲಿ ಬೌಲಿಂಗ್ ಮಾಡಿದರು. ಈ ವೇಳೆ ಕೀವೀಸ್‍ ಬ್ಯಾಟ್ಸ್ ಮನ್ ಗಳು 13 ರನ್ ಗಳಿಸಿ ಭಾರತಕ್ಕೆ ಆರು ಎಸೆತಗಳಲ್ಲಿ 14 ರನ್ ಗಳಿಸುವ ಗೆಲುವಿನ ಗುರಿ ನೀಡಿದರು. ಭಾರತದ ಪರ ಬ್ಯಾಟಿಂಗ್ ಗೆ ಬಂದ ಕೆಎಲ್ ರಾಹುಲ್ ಮೊದಲ ಎಸೆತವನ್ನೇ ಸಿಕ್ಸರ್, ಎರಡನೇ ಎಸೆತವನ್ನು ಬೌಂಡರಿಗಟ್ಟಿ ಗುರಿ ಸುಲಭ ಮಾಡಿದರು. ಆದರೆ ಮರು ಎಸೆತದಲ್ಲಿ ಔಟಾದರು. ಹಾಗಿದ್ದರೂ ಆಗ ಮತ್ತೆ ನಾಲ್ಕು ರನ್ ಗಳ ಅಗತ್ಯವಿತ್ತಷ್ಟೇ. ಇನ್ನೊಂದು ತುದಿಯಲ್ಲಿದ್ದ ವಿರಾಟ್ ಕೊಹ್ಲಿ ಮುಂದಿನ ಎಸೆತದಲ್ಲಿ ಎರಡು ರನ್ ಗಳಿಸಿದರು. ಇದರಿಂದಾಗಿ ಎರಡು ಬಾಲ್ ಗಳಲ್ಲಿ ಎರಡು ರನ್ ಎನ್ನುವ ಸ್ಥಿತಿ ಎದುರಾಯಿತು. ಮುಂದಿನ ಎಸೆತವನ್ನು ಕೊಹ್ಲಿ ಬೌಂಡರಿಗಟ್ಟುವುದರೊಂದಿಗೆ ಭಾರತ ಮತ್ತೊಂದು ಸೂಪರ್ ಓವರ್ ಗೆಲುವು ಸಾಧಿಸಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments