ಲಂಡನ್: ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳಲು ಈಗಾಗಲೇ ಟೀಂ ಇಂಡಿಯಾ ಸೌಥಾಂಪ್ಟನ್ ಗೆ ಬಂದಿಳಿದಿದೆ.
ಈ ವಿಶ್ವ ಚಾಂಪಿಯನ್ ಶಿಪ್ ಗೆಲ್ಲುವುದು ಭಾರತಕ್ಕೆ ಪ್ರತಿಷ್ಠೆಯ ವಿಚಾರ. ಹೀಗಾಗಿ ನ್ಯೂಜಿಲೆಂಡ್ ಮಣಿಸಲು ಭಾರತ ಕಠಿಣ ಗೇಮ್ ಪ್ಲ್ಯಾನ್ ನನ್ನೇ ಮಾಡಿಕೊಂಡಿದೆ.
ಭಾರತ ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿಗೆ ಓಪನಿಂಗ್ ಬೌಲಿಂಗ್ ನೀಡುವ ಸಾಧ್ಯತೆಯಿದೆ. ಈ ಬಗ್ಗೆ ಈಗಾಗಲೇ ನಾಯಕ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಸುಳಿವು ನೀಡಿದ್ದಾರೆ. ಸಿರಾಜ್ ಆಸ್ಟ್ರೇಲಿಯಾ ಪಿಚ್ ನಲ್ಲಿ ಯಶಸ್ಸು ಗಳಿಸಿದ್ದರಿಂದ ಅವರಿಗೆ ಇಂಗ್ಲೆಂಡ್ ನ ವೇಗದ ಪಿಚ್ ನಲ್ಲೂ ಅವಕಾಶ ಸಿಗುವ ಸಾಧ‍್ಯತೆಯಿದೆ. ಅದಲ್ಲದೆ, ಅನುಭವಿ ಇಶಾಂತ್ ಶರ್ಮಾ ಸಾಥ್ ನೀಡಲಿದ್ದಾರೆ. ಸ್ಪಿನ್ನರ್ ಗಳಾಗಿ ರವಿಚಂದ್ರನ್ ಅಶ್ವಿನ್ ಗೆ ಜಡೇಜಾ ಸಾಥ್ ನೀಡಬಹುದು. ಹೀಗಾದಲ್ಲಿ ಅಕ್ಸರ್ ಪಟೇಲ್ ಹೊರಗುಳಿಯಬೇಕಾಗಬಹುದು. ಬ್ಯಾಟಿಂಗ್ ನಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸಲಾಗದು. ಒಟ್ಟಾರೆ ಈ ಟೆಸ್ಟ್ ಚಾಂಪಿಯನ್ ಶಿಪ್ ನ್ನಾದರೂ ಗೆದ್ದುಕೊಂಡು ಐಸಿಸಿ ಟ್ರೋಫಿ ಗೆಲ್ಲಲಾಗದ ತಮ್ಮ ಬರವನ್ನು ನೀಗಿಸಲು ಕೊಹ್ಲಿ-ಶಾಸ್ತ್ರಿ ಜೋಡಿ ಪಣ ತೊಟ್ಟಿದೆ.