ಇಸ್ಲಾಮಾಬಾದ್: ಟೀಂ ಇಂಡಿಯಾಕ್ಕೆ ನಮ್ಮ ಜತೆ ಆಡಲು ಭಯ. ಅದಕ್ಕೆ ಉಭಯ ದೇಶಗಳ ನಡುವೆ ಸರಣಿ ನಡೆಯಲಿ ಎಂದು ನಾವು ಆಹ್ವಾನವಿತ್ತರೆ, ಬರಲ್ಲ ಎಂದು ಹಿಂದೇಟು ಹಾಕುತ್ತಾರೆ.ಹೀಗಂತ ಪಾಕ್ ಕ್ರಿಕೆಟ್ ಸಂಸ್ಥೆ (ಪಿಸಿಬಿ) ಮುಖ್ಯಸ್ಥ ಶಹರ್ಯಾರ್ ಖಾನ್ ವ್ಯಂಗ್ಯವಾಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡದ ಸದಸ್ಯರಿಗೆ ಪ್ರಧಾನಿ ನವಾಬ್ ಷರೀಫ್ ಉಪಸ್ಥಿತಿಯಲ್ಲಿ ಸನ್ಮಾನ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಹರ್ಯಾರ್ ಖಾನ್ ಭಾರತವನ್ನು ಕೆಣಕುವಂತೆ ಮಾತನಾಡಿದ್ದಾರೆ.
‘ಚಾಂಪಿಯನ್ಸ್ ಟ್ರೋಫಿಯಲ್ಲಿ ನಮ್ಮ ತಂಡ ಅವರ ತಂಡವನ್ನು ಸೋಲಿಸಿದ ತಕ್ಷಣ ಉಭಯ ದೇಶಗಳ ನಡುವೆ ಸರಣಿ ನಡೆಸೋಣ ಎಂದು ಆಹ್ವಾನಿಸಿದ್ದೆವು. ಆದರೆ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಆಡೋಣ. ಉಭಯ ದೇಶಗಳ ನಡುವೆ ಸರಣಿ ಬೇಡ ಎಂದು ಭಾರತ ಹಿಂದೇಟು ಹಾಕುತ್ತಲೇ ಇದೆ’ ಎಂದು ಶಹರ್ಯಾರ್ ಖಾನ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ