ಕೊಲಂಬೋದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 622 ರನ್`ಗಳಿಗೆ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಬಳಿಕ ಬ್ಯಾಟಿಂಗ್ ಆರಂಭಿಸಿರುವ ಶ್ರೀಲಂಕಾ ಆರಂಭದಲ್ಲೇ ಆಘಾತ ಅನುಭವಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಅಮೋಘ ಬ್ಯಾಟಿಂಗ್ ಮಾಡಿತು. ಚೇತೇಶ್ವರ್ ಪೂಜಾರ(133) ಮತ್ತು ಅಜಿಂಕ್ಯ ರಹಾನೆ(132) ಶತಕ ಸಿಡಿಸಿ ತಂಡಕ್ಕೆ ನೆರವಾದರು. ನಿನ್ನೆ 350 ರನ್ ಗಳಿಸಿದ್ದ ಭಾರತ ತಂಡ ಇವತ್ತು ಬ್ಯಾಟಿಂಗ್ ಮುಂದುವರೆಸಿತು. ರಹಾನೆ 132 ರನ್ ಸಿಡಿಸಿ ಔಟಾದ ಬಳಿಕ ಆಲ್ರೌಂಡರ್`ಗಳು ಉತ್ತಮ ಬ್ಯಾಟಿಂಗ್ ಮಾಡಿದರು. ಅಶ್ವಿನ್ (54), ವೃದ್ಧಿಮಾನ್ ಸಹಾ (67) ಜಡೇಜಾ(70) ತಲಾ ಅರ್ಧಶತಕ ಸಿಡಿಸಿದರು. 9 ವಿಕೆಟ್ ನಷ್ಟಕ್ಕೆ ಭಾರತ 622 ರನ್ ಗಳಿಸಿದ್ದಾಗ ನಾಯಕ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿದರು.
ಭಾರತದ ಮೊದಲ ಇನ್ನಿಂಗ್ಸ್`ನ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿರುವ ಶ್ರೀಲಂಕಾ ತಂಡ ಆರಂಭದಲ್ಲೇ 2 ವಿಕೆಟ್ ಕಳೆದುಕೊಮಡು ಸಂಕಷ್ಟಕ್ಕೆ ಸಿಲುಕಿದೆ. ಎರಡೂ ವಿಕೆಟ್ ಪಡೆದಿರುವ ಆರ್. ಅಶ್ವಿನ್ ಆರಂಭದಲ್ಲೇ ಸಿಂಹಳಿಯರಿಗೆ ಬಿಸಿ ಮುಟ್ಟಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ