ಹರಾರೆ: ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರನೇ ಏಕದಿನ ಪಂದ್ಯವನ್ನು ಪ್ರಯಾಸಪಟ್ಟು 13 ರನ್ ಗಳಿಂದ ಗೆದ್ದುಕೊಂಡ ಟೀಂ ಇಂಡಿಯಾ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ಜಿಂಬಾಬ್ವೆ ಪರ ಸಿಕಂದರ್ ರಾಜಾ ಶತಕ ಸಿಡಿಸಿ (115) ಮಿಂಚಿದರು.ಸೀನ್ ವಿಲಿಯಮ್ಸ್ 45 ರನ್ ಗಳಿಸಿದರು. ಅಂತೂ ಇಂತೂ ಪ್ರಯಾಸಪಟ್ಟು ಭಾರತ ಎದುರಾಳಿಗಳನ್ನು 49.3 ಓವರ್ ಗಳಲ್ಲಿ 276 ರನ್ ಗಳಿಗೆ ಆಲೌಟ್ ಮಾಡುವ ಮೂಲಕ ಗೆಲುವು ಕಂಡಿತು.
ಈ ಗೆಲುವಿನೊಂದಿಗೆ ಕೆಎಲ್ ರಾಹುಲ್ ನಾಯಕರಾಗಿ ಮೊದಲ ಸರಣಿ ಗೆಲುವು ಅದರಲ್ಲೂ ಕ್ಲೀನ್ ಸ್ವೀಪ್ ಗೆಲುವಿನ ಖುಷಿ ಪಡೆದರು. ಇದಕ್ಕೆ ಮೊದಲು ಭಾರತ ತಂಡದ ನೇತೃತ್ವ ವಹಿಸಿದ್ದಾಗ ರಾಹುಲ್ ಗೆ ಕ್ಲೀನ್ ಸ್ವೀಪ್ ಸೋಲಿನ ಅವಮಾನ ಎದುರಾಗಿತ್ತು. ಈ ಪಂದ್ಯದಲ್ಲಿ ಭಾರತದ ಪರ 130 ರನ್ ಗಳಿಸಿದ್ದ ಶುಬ್ನಂ ಗಿಲ್ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.