ದುಬೈ: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಬಹುತೇಕ ಪಂದ್ಯಗಳೂ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಆಡುತ್ತಿದೆ. ಆದರೆ ಇಲ್ಲಿ ಮೊದಲು ಬ್ಯಾಟಿಂಗ್ ಮಾಡುವವರಿಗೆ ಸೋಲೇ ಗತಿ ಎನ್ನುವಂತಾಗಿದೆ. ಇದು ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಆಕ್ರೋಶಕ್ಕೆ ಕಾರಣವಾಗಿದೆ.
ದುಬೈ ಪಿಚ್ ತುಂಬಾ ನಿಧಾನಗತಿ ಮತ್ತು ಕೆಳಮಟ್ಟದಲ್ಲಿ ಬಾಲ್ ಪುಟಿಯುತ್ತಿದ್ದು, ಇದರಿಂದ ಮೊದಲು ಬ್ಯಾಟಿಂಗ್ ಮಾಡುವವರಿಗೆ ರನ್ ಮಾಡಲೇ ಆಗುತ್ತಿಲ್ಲ. ಇಲ್ಲಿ ಮೊದಲು ಬ್ಯಾಟಿಂಗ್ ಮಾಡುವಾಗ ಬ್ಯಾಟರ್ಸ್ ಪರದಾಡಬೇಕಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮಗೆ ಎರಡೂ ಪಂದ್ಯಗಳಲ್ಲಿ ದೊಡ್ಡ ಹೊಡೆತಗಳಿಗೆ ಕೈ ಹಾಕಲೂ ಸಾಧ‍್ಯವಾಗಲಿಲ್ಲ. ನಾವು ಮಾತ್ರವಲ್ಲ, ಮೊದಲು ಬ್ಯಾಟ್ ಮಾಡಿದ ಎಲ್ಲಾ ತಂಡಗಳೂ ಈ ಪಿಚ್ ನಲ್ಲಿ ಈ ಸಮಸ್ಯೆ ಎದುರಿಸಿವೆ ಎಂದು ವಿಕ್ರಮ್ ರಾಥೋಡ್ ಹೇಳಿದ್ದಾರೆ.