ನವದೆಹಲಿ: ಎಲ್ಲಾ ಸರಿ ಹೋಗಿದ್ದರೆ ಇಷ್ಟೊತ್ತಿಗಾಗಲೇ ಭಾರತ ಕ್ರಿಕೆಟ್ ಮಂಡಳಿಯ ಅಧ್ಯಕ್ಷರ ಸ್ಥಾನಕ್ಕೆ ಈಗಾಗಲೇ ಯಾರಾದರೂ ಪೀಠಾರೋಹಣ ಮಾಡಬೇಕಿತ್ತು. ಆದರೆ ಯಾಕೋ ಸುಪ್ರೀಂ ಕೋರ್ಟ್ ಗೆ ಸಲಹಾ ಸಮಿತಿ ನೀಡಿದ ಪಟ್ಟಿ ಸರಿಯೆನಿಸಲಿಲ್ಲ. ಹೀಗಾಗಿ ಮೊನ್ನೆ ಆಗದ ಕೆಲಸ ಇಂದಾದರೂ ನಡೆಯಬಹುದು ಎಂಬುದು ಎಲ್ಲರ ನಿರೀಕ್ಷೆ.
ಸುಪ್ರೀಂ ಕೋರ್ಟ್ ನೇಮಿಸಿದ ಇಬ್ಬರು ಸದಸ್ಯರ ಸಮಿತಿ ಜನವರಿ 20 ರಂದು ಒಂಭತ್ತು ಆಡಳಿತಾಧಿಕಾರಿಗಳ ಹೆಸರು ಸೂಚಿಸಿತ್ತು. ಆದರೆ ಹೆಸರು ಜಾಸ್ತಿಯಾಯಿತು ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್ ಹೊಸದಾಗಿ ಹೆಸರು ಸೂಚಿಸಲು ನಿರ್ದೇಶಿಸಿತ್ತು.
ಅದರಂತೆ ಇಂದು ಸುಪ್ರೀಂ ಕೋರ್ಟ್ ಹೊಸ ಆಡಳಿತಾಧಿಕಾರಿಗಳನ್ನು ಘೋಷಿಸುವ ಸಾಧ್ಯತೆಯಿದೆ. ಜನವರಿ 2 ರಂದು ಸುಪ್ರೀಂ ಕೋರ್ಟ್ ಲೋಧಾ ಸಮಿತಿಯ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಅಡ್ಡಿಪಡಿಸಿದ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿ ಅಜಯ್ ಶಿರ್ಕೆಯವರನ್ನು ಪದಚ್ಯುತಗೊಳಿಸಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ