ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸಮವಸ್ತ್ರ ಒದಗಿಸುತ್ತಿದ್ದ ಸ್ಟಾರ್ ಇಂಡಿಯಾ ಸಂಸ್ಥೆ ಇನ್ನು ಮುಂದಿನ ಬಾರಿಗೆ ಸಮವಸ್ತ್ರ ಒದಗಿಸಲು ಬಿಡ್ ಮಾಡದೇ ಇರಲು ತೀರ್ಮಾನಿಸಿದೆ.
ಸುಪ್ರೀಂ ಕೋರ್ಟ್ ಅದೇಶದ ನಂತರ ಬಿಸಿಸಿಐ ಆಡಳಿತದಲ್ಲಿ ಅಲ್ಲೋಕಲ್ಲೋಲ ಸೃಷ್ಟಿಯಾಗಿದೆ. ಭಾರತ ತಂಡದ ಜತೆಗೆ ನಮ್ಮ ಸಂಸ್ಥೆಯ ಹೆಸರಿನ ಜೆರ್ಸಿಗಳೂ ವಿಶ್ವದಾದ್ಯಂತ ಹೆಸರು ಮಾಡುತ್ತಿವೆ. ಆದರೆ ಸದ್ಯಕ್ಕೆ ಬಿಸಿಸಿಐನಲ್ಲಿ ಉಂಟಾದ ಗೊಂದಲಗಳ ಹಿನ್ನಲೆಯಲ್ಲಿ ಬಿಡ್ ಮಾಡದೇ ಇರಲು ತೀರ್ಮಾನಿಸಿದ್ದೇವೆ ಎಂದು ಸ್ಟಾರ್ ಸಂಸ್ಥೆ ಹೇಳಿಕೊಂಡಿದೆ.
ಹಾಗಾಗಿ ಟೀಂ ಇಂಡಿಯಾಗೆ ಹೊಸ ಉಡುಪು ನೀಡುವ ಸಂಸ್ಥೆ ಯಾವುದು ಎಂದು ಕಾದು ನೋಡಬೇಕಿದೆ. ಸಹರಾ ಸಂಸ್ಥೆಯ ನಂತರ ಸ್ಟಾರ್ ಸಂಸ್ಥೆ ಬಿಡ್ ಪಡೆದುಕೊಂಡಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.