ಶ್ರೀಲಂಕಾ ಕ್ರಿಕೆಟ್ ಮಂಡಳಿ ಮುಂಬರುವ ಭಾರತ ವಿರುದ್ಧದ ಸರಣಿ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿದೆ. ಭಾರತದ ವಿರುದ್ಧದ ಸರಣಿಗೆ ಶ್ರೀಲಂಕಾ ವೇಗದ ಬೌಲಿಂಗ್ ಕೋಚ್ ಆಗಿ ಚಮಿಂದಾ ವಾಸ್ ಅವರನ್ನ ನೇಮಕ ಮಾಡಿದೆ.
3 ಟೆಸ್ಟ್ ಪಂದ್ಯಗಳು, 5 ಏಕದಿನ ಪಂದ್ಯಗಳು ಮತ್ತು ಏಕೈಕ ಟಿ-20 ಪಂದ್ಯ ಸೇರಿದಂತೆ ಭಾರತದ ಶ್ರೀಲಂಕಾ ಪ್ರವಾಸ ಜುಲೈ 26ರಿಂದ ಆರಂಭವಾಗಲಿದೆ. ಭಾರತ ವಿರುದ್ಧದ ಕಠಿಣ ಸರಣಿಗೆ ಶ್ರೀಲಂಕಾ ತಂಡಕ್ಕೆ ಕೋಚಿಂಗ್ ನೀಡಲು ವಾಸ್ ಅವರ ಕರೆ ತರಲಾಗಿದೆ. 111 ಟೆಸ್ಟ್ ಪಂದ್ಯಗಳನ್ನಾಡಿರುವ ಚಮಿಂದಾ ವಾಸ್ 355 ವಿಕೆಟ್ ಪಡೆದಿದ್ದಾರೆ. 322 ಏಕದಿನ ಪಂದ್ಯಗಳಲ್ಲಿ ವಾಸ್ 400 ವಿಕೆಟ್ ಉರುಳಿಸಿದ್ದಾರೆ.
ಶ್ರೀಲಂಕಾದ ಮೋಸ್ಟ್ ಸಕ್ಸಸ್ ಫುಲ್ ಬೌಲರ್ ಆಗಿದ್ದ ವಾಸ್ ಟೀಮ್ ಇಂಡಿಯಾ ವಿರುದ್ಧ ಉತ್ತಮ ಬೌಲಿಂಗ್ ಮಾಡಿದ ದಾಖಲೆ ಹೊಂದಿದ್ದಾರೆ. ಐರ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳಿಗೂ ಕೆಲ ಕಾಲ ಕೋಚಿಂಗ್ ಕೊಟ್ಟಿದ್ದಾರೆ. ಚಮಿಂದಾ ವಾಸ್ ತಮ್ಮ ಬೌಲಿಂಗ್ ಪಟ್ಟುಗಳನ್ನ ಸಿಂಹಳಿಯರಿಗೆ ಹೇಳಿಕೊಡಲಿದ್ದು, ಭಾರತದ ಸವಾಲು ಎದುರಿಸಲು ಸಜ್ಜುಗೊಳಿಸಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ