ಕೋಲ್ಕೊತ್ತಾ: ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ಉಗ್ರರ ಪೈಶಾಚಿಕ ಕೃತ್ಯದ ನಂತರ ಭಾರತ ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯವಾಡಬಾರದು ಎಂಬ ಒತ್ತಾಯಗಳಿಗೆ ಮಾಜಿ ನಾಯಕ ಸೌರವ್ ಗಂಗೂಲಿ ಧ್ವನಿಗೂಡಿಸಿದ್ದಾರೆ.
ಈಗಾಗಲೇ ಕ್ರಿಕೆಟಿಗರಾದ ಗೌತಮ್ ಗಂಭೀರ್, ಹರ್ಭಜನ್ ಸಿಂಗ್ ಮುಂತಾದವರು ಇದೇ ಒತ್ತಾಯ ಮಾಡಿದ್ದರು. ಬಿಸಿಸಿಐ ಕೂಡಾ ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಕೇಂದ್ರದ ಒಪ್ಪಿಗೆಯಿಲ್ಲದೇ ಆಡುವುದಿಲ್ಲ ಎಂದಿತ್ತು.
ಇದೀಗ ಈ ವಿಚಾರದ ಬಗ್ಗೆ ಮಾತನಾಡಿರುವ ಗಂಗೂಲಿ ‘ಕ್ರಿಕೆಟ್ ಮಾತ್ರವಲ್ಲ, ಹಾಕಿ, ಫುಟ್ಬಾಲ್ ಸೇರಿದಂತೆ ಯಾವುದೇ ಕ್ರೀಡೆಯನ್ನೂ ಆ ದೇಶದೊಂದಿಗೆ ಆಡಬಾರದು. ಇಂತಹ ದಾಳಿ ನಡೆದ ನಂತರ ಎಲ್ಲಾ ರೀತಿಯ ಕ್ರೀಡಾ ಬಾಂಧವ್ಯವನ್ನು ಕಡಿದುಹಾಕಬೇಕು. ಈ ಮೂಲಕ ಪಾಕಿಸ್ತಾನಕ್ಕೆ ಸ್ಟ್ರಾಂಗ್ ಮೆಸೇಜ್ ಕೊಡಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ