ಮುಂಬೈ: ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಹೊರನಡೆಯುತ್ತಿರುವ ಸುದ್ದಿಗಳ ಬೆನ್ನಲ್ಲೇ ಸೌರವ್ ಗಂಗೂಲಿ ಮಹತ್ವದ ಸುಳಿವು ನೀಡಿದ್ದಾರೆ.
ಅಧ್ಯಕ್ಷ ಪಟ್ಟ ಕಳೆದುಕೊಂಡ ಬಳಿಕ ಐಪಿಎಲ್ ಮುಖ್ಯಸ್ಥ ಸ್ಥಾನವನ್ನೂ ಗಂಗೂಲಿ ತಿರಸ್ಕರಿಸಿದ್ದರು. ಗಂಗೂಲಿ ಪಟ್ಟ ಕಳೆದುಕೊಳ್ಳಲು ಅವರು ಬಿಜೆಪಿ ಸೇರಲು ಹಿಂದೇಟು ಹಾಕಿದ್ದೇ ಕಾರಣ ಎಂಬ ರಾಜಕೀಯ ಕೆಸರೆರಚಾಟಗಳೂ ನಡೆದಿವೆ.
ಆದರೆ ಇದರ ಬೆನ್ನಲ್ಲೇ ಗಂಗೂಲಿ ಮೊದಲ ಬಾರಿಗೆ ಬಹಿರಂಗ ಹೇಳಿಕೆ ನೀಡಿದ್ದು, ನಾನು ಒಬ್ಬ ಆಡಳಿತಗಾರನಾಗಿದ್ದೆ ಮತ್ತು ಈಗ ಇನ್ನೊಂದು ದೊಡ್ಡ ಹುದ್ದೆಗೆ ಹೋಗುತ್ತಿದ್ದೇನೆ. ಯಾವತ್ತೂ ಆಟಗಾರನಾಗಿಯೇ ಅಥವಾ ಆಡಳಿತಗಾರನಾಗಿಯೇ ಇರಲು ಸಾಧ್ಯವಿಲ್ಲ. ಎರಡೂ ಕೆಲಸಗಳೂ ನನಗೆ ಖುಷಿ ಕೊಟ್ಟಿದ್ದವು ಎಂದು ಗಂಗೂಲಿ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಅವರು ಐಸಿಸಿ ಅಧ್ಯಕ್ಷ ಸ್ಥಾನ ಮೇಲೆ ಕಣ್ಣಿಟ್ಟಿರಬಹುದು ಎನ್ನಲಾಗಿದೆ.
-Edited by Rajesh Patil