ಮುಂಬೈ: ಟೀಂ ಇಂಡಿಯಾದಲ್ಲಿ ತಮಗೆ ಅವಕಾಶವೇ ಸಿಗಲ್ಲ ಎಂದು ಹಳಿದುಕೊಳ್ಳುವ ಸಂಜು ಸ್ಯಾಮ್ಸನ್ ಮತ್ತು ಶ್ರೇಯಸ್ ಅಯ್ಯರ್ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ವಿಫಲರಾಗುತ್ತಿದ್ದಾರೆ.
ಇದೀಗ ದುಲೀಪ್ ಟ್ರೋಫಿಯಲ್ಲಿ ಕಳಪೆ ಪ್ರದರ್ಶನ ನೀಡುವ ಮೂಲಕ ಮತ್ತೊಮ್ಮೆ ಆ ಮಾತನ್ನು ಅವರ ಸಾಬೀತುಪಡಿಸಿದ್ದಾರೆ. ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ತೀವ್ರ ಹೆಣಗಾಡುವ ಆಟಗಾರ ಎಂದರೆ ಸಂಜು ಸ್ಯಾಮ್ಸನ್. ಅವರನ್ನು ತಂಡಕ್ಕೆ ಆಯ್ಕೆ ಮಾಡದೇ ಇದ್ದರೆ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನವನ್ನೇ ಶುರು ಮಾಡುತ್ತಾರೆ.
ಇದೀಗ ದುಲೀಪ್ ಟ್ರೋಫಿಯಲ್ಲಿ ಸಂಜು ಸ್ಯಾಮ್ಸನ್ ಗೆ ಆಡುವ ಅವಕಾಶ ನೀಡಲಾಗಿದೆ. ಇಂಡಿಯಾ ಡಿ ಪರ ವಿಕೆಟ್ ಕೀಪರ್ ಬ್ಯಾಟಿನಾಗಿರುವ ಸಂಜು ಮೊದಲ ಇನಿಂಗ್ಸ್ ನಲ್ಲಿ ಗಳಿಸಿದ್ದು ಕೇವಲ 5 ರನ್. ತಂಡ ಸಂಕಷ್ಟದಲ್ಲಿರುವಾಗ ಕೊಂಚ ಹೊತ್ತು ನಿಂತು ಆಡಿದ್ದರೆ ಬಹುಶಃ ಆಯ್ಕೆಗಾರರು ಅವರನ್ನು ಮುಂದಿನ ಸರಣಿಗಳಿಗೆ ಪರಿಗಣಿಸಬಹುದಿತ್ತು. ಆದರೆ ಸಿಕ್ಕ ಅವಕಾಶವನ್ನು ಅವರು ಬಳಸಿಕೊಳ್ಳುವುದೇ ಅಲ್ಲ.
ಇನ್ನು ಶ್ರೇಯಸ್ ಅಯ್ಯರ್ ನದ್ದೂ ಇದೇ ಕತೆ. ಇಂಡಿಯಾ ಡಿ ತಂಡದ ನಾಯಕರಾಗಿರುವ ಶ್ರೇಯಸ್ ಮೊದಲ ಪಂದ್ಯದಲ್ಲೂ ವಿಫಲರಾಗಿದ್ದರು. ಎರಡನೇ ಪಂದ್ಯದಲ್ಲೂ ಮೊದಲ ಇನಿಂಗ್ಸ್ ನಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದಾರೆ. ಅದೂ ಸನ್ ಗ್ಲಾಸ್ ಹಾಕಿಕೊಂಡು ಬ್ಯಾಟಿಂಗ್ ಬಂದು ಅವರು ಭಾರೀ ಟೀಕೆಗೊಳಗಾಗಿದ್ದಾರೆ. ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಭಾರೀ ಪೈಪೋಟಿಯಿದೆ. ಅಂತಹದ್ದರಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವುದು ಬಿಟ್ಟು ಈ ಇಬ್ಬರೂ ನಿರಾಸೆ ಮಾಡುತ್ತಲೇ ಬಂದಿದ್ದಾರೆ.