ನವದೆಹಲಿ: ಪಾಕಿಸ್ತಾನದಲ್ಲಿ ಭದ್ರತೆಯಿಲ್ಲ ಎಂಬ ಕಾರಣಕ್ಕೆ ಹಲವು ಆಟಗಾರರು ಆ ದೇಶಕ್ಕೆ ಪ್ರವಾಸ ಮಾಡಲು ಹಿಂಜರಿಯುತ್ತಾರೆ. ಆದರೆ ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಈ ವಿಷಯದಲ್ಲಿ ತನ್ನ ಪತ್ನಿ ಸಾನಿಯಾ ಮಿರ್ಜಾರನ್ನು ಉದಾಹರಿಸಿದ್ದಾರೆ.
ಪಾಕಿಸ್ತಾನದಲ್ಲಿ ಆಡಲು ಯಾವುದೇ ಬೇಡ. ಭದ್ರತೆ ವಿಷಯಕ್ಕೆ ನನ್ನ ಭಾರತೀಯ ಪತ್ನಿಯನ್ನೇ ನೋಡಿ. ಆಕೆ ಯಾವುದೇ ಭದ್ರತೆಯಿಲ್ಲದೆ ಪಾಕಿಸ್ತಾನದಲ್ಲಿ ಓಡಾಡಬಹುದು ಎಂದು ಶೊಯೇಬ್ ಹೇಳಿಕೊಂಡಿದ್ದಾರೆ.
ಪಾಕಿಸ್ತಾನದಲ್ಲಿ ಪಾಕ್ ಕ್ರಿಕೆಟ್ ಲೀಗ್ ಪಂದ್ಯ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಇಲ್ಲಿ ಆಡಲು ಹಿಂಜರಿಯುತ್ತಿರುವ ಆಟಗಾರರಿಗೆ ಶೊಯೇಬ್ ಈ ರೀತಿ ಮನವಿ ಮಾಡಿದ್ದಾರೆ. ಸಾನಿಯಾ ಕೂಡಾ ಪಾಕಿಸ್ತಾನಕ್ಕೆ ಭೇಟಿ ನೀಡಿದಾಗಲೆಲ್ಲಾ ಭದ್ರತಾ ಪಡೆಯವರನ್ನು ಜತೆಗೇ ಹೊತ್ತೊಯ್ಯವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.