Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಧವನ್ ಸ್ಫೋಟಕ ಶತಕ, ಪೂಜಾರ ತಾಳ್ಮೆಯ ಸೆಂಚುರಿ: ಗಾಲೆ ಟೆಸ್ಟ್`ನಲ್ಲಿ ಭಾರತ ಮೇಲುಗೈ

ಧವನ್ ಸ್ಫೋಟಕ ಶತಕ, ಪೂಜಾರ ತಾಳ್ಮೆಯ ಸೆಂಚುರಿ: ಗಾಲೆ ಟೆಸ್ಟ್`ನಲ್ಲಿ ಭಾರತ ಮೇಲುಗೈ
ಗಾಲೆ , ಬುಧವಾರ, 26 ಜುಲೈ 2017 (17:36 IST)
ಗಾಲೆಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ತಂಡ ಮೇಲುಗೈ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರನಾಯಕ ವಿರಾಟ್ ಕೊಹ್ಲಿ ತೀರ್ಮಾನವನ್ನ ಸಮರ್ಥಿಸುವಂತೆ ಬ್ಯಾಟಿಂಗ್ ಮಾಡಿದ ಆರಂಭಿಕರು ಶ್ರೀಲಂಕಾ ಬೌಲರ್`ಗಳನ್ನ ದಂಡಿಸಿದರು. ಏಕದಿನ ಕ್ರಿಕೆಟ್`ನಂತೆ ಆಡಿದ ಶಿಖರ್ ಧವನ್ ಕೇವಲ 168 ಎಸೆತಗಳಲ್ಲಿ  ಸ್ಫೋಟಕ 30 ರನ್ ಸಿಡಿಸಿದರು. ಇದರಲ್ಲಿ ಭರ್ಜರಿ 30 ಬೌಂಡರಿಗಳಿದ್ದವು.

ಯುವ ಕ್ರಿಕೆಟಿಗ ಮುಕುಂದ್ ಔಟಾದ ಬಳಿಕ ಧವನ್ ಜೊತೆ ಸೇರಿಕೊಂಡ ಚೇತೇಶ್ವರ್ ಪೂಜಾರ ತಾಳ್ಮೆಯ ಆಟವಾಡಿದರು. ಧವನ್`ಗೆ ಉತ್ತಮ ಸಾಥ್ ನೀಡಿದ ಪೂಜಾರ ಸಹ 144 ರನ್ ಸಿಡಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೊದಲ ದಿನದಾಟದಂತ್ಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 399 ರನ್ ಕಲೆಹಾಕಿದೆ. 144 ರನ್ ಗಳಿಸಿರುವ ಪೂಜಾರ ಮತ್ತು 39 ರನ್ ಗಳಿಸಿರುವ ಅಜಿಂಕ್ಯ ರಹಾನೆ ಕ್ರೀಸ್`ನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ದಿನದಾಟದಂತ್ಯಕ್ಕೆ ಭಾರತ 399/3
ಶಿಖರ್ ಧವನ್: 190 ರನ್
ಚೇತೇಶ್ವರ್ ಪೂಜಾರ ಔಟಾಗದೇ: 144 ರನ್
ಅಜಿಂಕ್ಯ ರಹಾನೆ ಔಟಾಗದೇ: 39 ರನ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಡವಟ್ಟು ಮಾಡಿ ಯುವರಾಜ್ ಸಿಂಗ್ ರಿಂದ ನಗೆಪಾಟಲಿಗೀಡಾದ ಶಿಖರ್ ಧವನ್