ಚೆನ್ನೈ: ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮವಾಗಿ ಬೌಲಿಂಗ್ ಮತ್ತು ಬ್ಯಾಟಿಂಗ್ ಮಾಡುತ್ತಿದ್ದು, ಇಂಗ್ಲೆಂಡ್ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಹೊಟ್ಟೆ ಉರಿ ಪಟ್ಟುಕೊಂಡು ಟ್ವೀಟ್ ಮಾಡಿದ್ದಾರೆ. ಆದರೆ ವಾನ್ ಮಾಡಿದ ಟ್ವೀಟ್ ಗೆ ಆಸೀಸ್ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ತಿರುಗೇಟು ಕೊಟ್ಟಿದ್ದಾರೆ.
ಎರಡು ಅವಧಿಗಿಂತ ಮೊದಲೇ ಒಂದು ಇನಿಂಗ್ಸ್ ಮುಗಿದಿದೆ. ಭಾರತ ಮೊದಲನೇ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ರೀತಿ ಮೊದಲನೇ ಟೆಸ್ಟ್ ನಲ್ಲಿ ಬ್ಯಾಟಿಂಗ್ ಮಾಡಿದ್ದರೆ, ಪಂದ್ಯ ಡ್ರಾ ಆಗುತ್ತಿತ್ತು. ಇದು ಟೆಸ್ಟ್ ಕ್ರಿಕೆಟ್ ಗೆ ಉತ್ತಮ ಪಿಚ್ ಅಲ್ಲ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಟೀಕಿಸಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಶೇನ್ ವಾರ್ನ್ ಕಳೆದ ಪಂದ್ಯದಲ್ಲಿ ಭಾರತ ಸೋತಾಗ ಪಿಚ್ ಚೆನ್ನಾಗಿರಲಿಲ್ಲ ಎಂದು ಯಾರೂ ಹೇಳಿರಲಿಲ್ಲ. ಈ ಪಂದ್ಯದಲ್ಲಿ ಪಿಚ್ ಎರಡೂ ತಂಡಗಳಿಗೆ ಸಮನಾಗಿ ತಿರುವು ಪಡೆಯುತ್ತಿತ್ತು. ಇಂಗ್ಲೆಂಡ್ ಕಳಪೆ ಆಟವಾಡಿದೆ ಮತ್ತು ರೋಹಿತ್, ಪಂತ್, ಅಜಿಂಕ್ಯಾ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ತೋರಿಸಿಕೊಟ್ಟರು ಎಂದು ವಾರ್ನ್ ತಿರುಗೇಟು ಕೊಟ್ಟಿದ್ದಾರೆ.