ಹ್ಯಾಮಿಲ್ಟನ್: ಮಹಿಳಾ ಏಕದಿನ ವಿಶ್ವಕಪ್ ನಲ್ಲಿ ಮಹತ್ವದ ಪಂದ್ಯವಾಡುತ್ತಿರುವ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿದ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿದೆ.
ಭಾರತದ ಆರಂಭ ಉತ್ತಮವಾಗಿಯೇ ಇತ್ತು. ಸ್ಮೃತಿ ಮಂಥನಾ 30, ಶಫಾಲಿ ವರ್ಮ 42 ರನ್ ಗಳಿಸಿ ಮಿಂಚಿದರು. ಬಳಿಕ ಯಸ್ತಿಕಾ ಭಾಟಿಯಾ 50 ರನ್ ಗಳಿಸಿ ಮಿಂಚಿದರು. ಆದರೆ ನಾಯಕಿ ಮಿಥಾಲಿ ರಾಜ್ ಶೂನ್ಯಕ್ಕೆ ನಿರ್ಗಮಿಸಿದರೆ, ಹರ್ಮನ್ ಪ್ರೀತ್ ಕೌರ್ 14 ರನ್ ಗೇ ವಿಕೆಟ್ ಒಪ್ಪಿಸಿದರು.
ಕೆಳ ಕ್ರಮಾಂಕದಲ್ಲಿ ಪೂಜಾ ವಸ್ತ್ರಾಕರ್ ಅಜೇಯ 30 ರನ್ ಗಳಿಸಿದರು. ಅಂತಿಮವಾಗಿ ಭಾರತ, ಬಾಂಗ್ಲಾಗೆ 230 ರನ್ ಗಳ ಗುರಿ ನಿಗದಿಪಡಿಸಿತು.