1983 ರಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದಿದ್ದು ನಿಮಗೆ ಗೊತ್ತೆ ಇದೆ. ಈ ಸಾಹಸಗಾಥೆ ಸಿನಿಮಾವಾಗಲಿದೆ ಎಂಬ ಮಾತು ಕಳೆದ 1 ವರ್ಷಗಳಿಂದ ಬಾಲಿವುಡ್ ಅಂಗಳದಿಂದ ಕೇಳಿ ಬರುತ್ತಲೇ ಇತ್ತು. ಜತೆಗೆ ಈ ಸಿನಿಮಾದ ಮುಖ್ಯ ಭೂಮಿಕೆಯನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ಪ್ರಶ್ನೆಯೂ ಸಹ ಹರಿದಾಡುತ್ತಲೇ ಇತ್ತು
ಮತ್ತೀಗ ಆ ಸಿನಿಮಾದ ಲೀಡ್ ರೋಲ್ ಮಾಡುವುದು ಸಲ್ಲು ಮಿಯಾ ಎನ್ನುವುದು ಖಚಿತವಾಗಿದೆ. ಸಲ್ಮಾನ್ ಅಭಿನಯದ ಸುಲ್ತಾನ್ ಕ್ರೀಡೆಗೆ ಸಂಬಂಧಿಸಿದ ಚಿತ್ರವಾಗಿದ್ದು ಭರ್ಜರಿ ಯಶಸ್ಸನ್ನು ಕಂಡಿತ್ತು. ಹೀಗಾಗಿ ವಿಶ್ವಕಪ್ ಗೆಲುವಿನ ಚಿತ್ರದ ಮುಖ್ಯಪಾತ್ರಕ್ಕೂ ಸಲ್ಮಾನ್ ಫಿಟ್ ಆಗ್ತಾರೆ ಎಂದು ಅಗ್ನಿಹೋತ್ರಿ ನಿರ್ಧರಿಸಿದ್ದಾರೆ.
ದಬಾಂಗ್ ಹೀರೋ ಜತೆ ಒಂದು ಸುತ್ತಿನ ಮಾತುಕತೆ ಕೂಡ ಮುಗಿದಿದೆ. ಆದರೆ ಸಲ್ಲು ಅತುಲ್ ಅಗ್ನಿಹೋತ್ರಿ ಮುಂದೆ ಒಂದು ಬೇಡಿಕೆ ಇಟ್ಟಿದ್ದರಂತೆ. ತಮ್ಮ ನೆಚ್ಚಿನ ನಿರ್ದೇಶಕ ಕಬೀರ್ ಖಾನ್ ನಿರ್ದೇಶನದಲ್ಲಿಯೇ ಸಿನಿಮಾ ಮೂಡಿಬರಬರಬೇಕು ಎಂಬುದು ಸಲ್ಲು ಕೋರಿಕೆಯಾಗಿತ್ತಂತೆ.
ಖಾನ್ ಕೂಡ ಅದಕ್ಕೊಪ್ಪಿದ್ದು ಸಲ್ಮಾನ್ ಅಭಿನಯದ ಟ್ಯೂಬ್ಲೈಟ್ ಸಿನಿಮಾ ಮುಗಿದ ಬಳಿಕ ವಿಶ್ವಕಪ್ ವಿಜಯದ ಕುರಿತಾಗಿರುವ ಸಿನಿಮಾವನ್ನು ಅವರು ಕೈಗೆತ್ತಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಕ್ರಿಕೆಟರ್ ಜೀವನಾಧಾರಿತ ಚಿತ್ರಗಳು ಬಾಲಿವುಡ್ನಲ್ಲಿ ಧೂಳೆಬ್ಬಿಸೋಕೆ ಆರಂಭಿಸಿವೆ. ಹೀಗಾಗಿ ಐತಿಹಾಸಿಕ ವಿಜಯದ ಕಥೆಗೆ ಕಮರ್ಷಿಯಲ್ ಟಚ್ ನೀಡಿ ಯಶಸ್ಸು ಕಾಣೋಕೆ ತಯಾರಾಗುತ್ತಿದ್ದಾರೆ ಅತುಲ್ ಅಗ್ನಿಹೋತ್ರಿ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.