ಮುಂಬೈ: ಸಚಿನ್ ತೆಂಡುಲ್ಕರ್ ಎಂಬ ದಿಗ್ಗಜ ಕ್ರಿಕೆಟಿಗ ಬದುಕಿದ್ದೇ ಕ್ರಿಕೆಟ್ ಗಾಗಿ, ತನ್ನ ಉಸಿರೇ ಕ್ರಿಕೆಟ್ ಎಂದು ಬದುಕಿದವರು. ಅವರಿಗೆ ಮತ್ತೆ ಮೈದಾನಕ್ಕಿಳಿಯುವ ಅವಕಾಶ ಸಿಕ್ಕಿದಾಗ ಭಾವುಕರಾಗಿದ್ದಾರೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ನಾಲ್ಕನೇ ಏಕದಿನ ಪಂದ್ಯಕ್ಕೆ ಮೊದಲು ಬ್ರೆಬೋರ್ನ್ ಮೈದಾನದಲ್ಲಿ ಮೊದಲ ಬಾರಿಗೆ ಗಂಟೆ ಭಾರಿಸುವ ಸಂಪ್ರದಾಯಕ್ಕೆ ನಾಂದಿ ಹಾಡಲಾಯಿತು. ಈ ಮೊದಲ ಗೌರವ ಸಚಿನ್ ಪಾಲಾಗಿತ್ತು.
ಇದಕ್ಕಾಗಿ ಅವರು ಪಂದ್ಯದ ಆರಂಭಕ್ಕೂ ಮೊದಲು ಮೈದಾನಕ್ಕಿಳಿದು ಔಪಚಾರಿಕವಾಗಿ ಗಂಟೆ ಬಾರಿಸಿ ಪಂದ್ಯದ ಆರಂಭ ಮಾಡಿದರು. ಇದರ ಬಗ್ಗೆ ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ. ‘ಮತ್ತೆ ಮೈದಾನಕ್ಕಿಳಿಯುವುದು ನಿಜಕ್ಕೂ ಗೌರವದ ವಿಚಾರ. ನನ್ನ ಶೂ ಕೆಳಗೆ ಮತ್ತೆ ಹುಲ್ಲು ಸೇರಿಕೊಂಡಿರುವುದರಿಂದ ನಿಜಕ್ಕೂ ಖುಷಿಯಾಗಿದ್ದೇನೆ.’ ಎಂದು ಸಚಿನ್ ಸಂತಸ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.