ಕೋಲ್ಕೊತ್ತಾ: ಮೊದಲ ಎರಡು ಏಕದಿನ ಪಂದ್ಯಗಳಲ್ಲೂ ಬೌಲರ್ ಗಳು ಬೆವರು ಹರಿಸಿದ್ದೇ ಬಂತು. ಅವೆರಡೂ ಪಂದ್ಯಗಳಂತೇ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿರುವ ಇಂದಿನ ಪಂದ್ಯದಲ್ಲೂ ರನ್ ಮಳೆ ನಿರೀಕ್ಷಿಸಬಹುದಾಗಿದೆ.
ಈ ಪಿಚ್ ಕೂಡಾ ಸಪಾಟೆಯಾಗಿ ಕಂಡುಬರುತ್ತಿದ್ದು, ಮತ್ತೊಂದು ರನ್ ಮಳೆ ಗ್ಯಾರಂಟಿ. ಪಿಚ್ ಕ್ಯುರೇಟರ್ ಕೂಡಾ ರನ್ ಹಬ್ಬ ಖಂಡಿತಾ ಎಂದಿದ್ದಾರೆ. ಹೀಗಾಗಿ ನಾಳೆ ಸಿಡಿಯಲಿರುವ ಬ್ಯಾಟ್ಸ್ ಮನ್ ಗಳು ಯಾರು ಎಂದು ನೋಡಬೇಕಿದೆ.
ಭಾರತ ಈ ಹಿಂದೆ ಇದೇ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ 400 ರನ್ ಸ್ಕೋರ್ ಮಾಡಿತ್ತು. ಆ ಪಂದ್ಯದಲ್ಲಿ ರೋಹಿತ್ ಶರ್ಮಾ ಏಕದಿನ ಪಂದ್ಯಗಳಲ್ಲಿ ಅತ್ಯಧಿಕ ವೈಯಕ್ತಿಕ ರನ್ (265) ಸಿಡಿಸಿದ್ದರು. ಕಳೆದೆರಡು ಪಂದ್ಯಗಳಲ್ಲಿ 350 ಪ್ಲಸ್ ರನ್ ಮಾಡಿದ್ದ ಉಭಯ ತಂಡಗಳು ಈ ಪಿಚ್ ನಲ್ಲಿ 400 ಸ್ಕೋರ್ ಮಾಡದಿದ್ದರೆ ಗೆಲುವು ಕಷ್ಟವಾಗಲೂ ಸಾಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ